December 3, 2024

ಉಳ್ಳಾಲ: ಧಾರ್ಮಿಕ ಸ್ಥಳಗಳ ಅಪವಿತ್ರಗೊಳಿಸಿದ ಪ್ರಕರಣ:
ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಕಮಿಷನರ್

0

ಉಳ್ಳಾಲ: ಧಾರ್ಮಿಕ ಸ್ಥಳಗಳಿಗೆ ಅಪವಿತ್ರಗೊಳಿಸಿದ ಪ್ರಕರಣ ಪ್ರಮುಖ ಆರೋಪಿಯ ಬಂಧನವಾದ ಹಿನ್ನೆಲೆಯಲ್ಲಿ ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ಅವರು ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪ್ರಕರಣ ಪ್ರಮುಖ ಆರೋಪಿ ದೇವದಾಸ್ ದೇಸಾಯಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಕಮಿಷನರ್ ಕುತ್ತಾರು ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿನ ಕ್ಷೇತ್ರದ ಬಗ್ಗೆ ತುಳುನಾಡಿನ ಜನ ಅಪಾರ ಹೊಂದಿದ್ದಾರೆ. ಈ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಅಧಿಕಾರಿಗಳು ಸಿಬ್ಬಂದಿಗಳು ಕೂಡ ಕೆಲವು ಪ್ರಕರಣಗಳು ವಿಳಂಬ ಆಗುವ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾನು ಕೂಡ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!