June 21, 2026

ಜೂನ್ 24ರಂದು ಬಿ.ಸಿ ರೋಡ್ ನಲ್ಲಿ  ಜಮೀಯತುಲ್ ಫಲಾಹ್ ಮತ್ತು ಸಂಯುಕ್ತ ಜಮಾಅತ್ ವತಿಯಿಂದ SIR ಮಾಹಿತಿ ಕಾರ್ಯಾಗಾರ

0
IMG-20260621-WA0089

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಮತ್ತು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ(ರಿ) ವತಿಯಿಂದ
SIR ಕುರಿತು ಮಾಹಿತಿ ಕಾರ್ಯಕ್ರಮವು
ದಿನಾಂಕ 24-06-2026 ನೇ ಬುಧವಾರ ಸಾಯಂಕಾಲ 4:00 ಗಂಟೆಗೆ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡು ಇಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು ಹಾಗೂ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.


ಮತದಾನ ಅತ್ಯಂತ ಶ್ರೇಷ್ಠವಾದ ಹಕ್ಕು. ಸಂವಿಧಾನ ಬದ್ಧವಾದ ಈ ಹಕ್ಕನ್ನು ಉಳಿಸಿಕೊಳ್ಳಲು ನಾವು ಮಾಡಬೇಕಾದ ಕರ್ತವ್ಯ ಏನು?
ಗಣತಿ ನಮೂನೆ ಭರ್ತಿ ಮಾಡುವುದು ಹೇಗೆ?
BLO ಗಳೊಂದಿಗೆ ನಿಮ್ಮ ಸಹಕಾರ ಹೇಗಿರಬೇಕು?
ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಿಗಲಿದೆ.ಸಾರ್ವಜನಿಕರು ಈ
ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯಬಹುದು.
ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳಿಂದ ಕನಿಷ್ಟ ಇಬ್ಬರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಜಮಾಅತ್ ನಲ್ಲಿ ಅದನ್ನು ತಿಳಿಸಬಹುದು ಇದರಿಂದ sir ಬಗೆಗಿನ ಗೊಂದಲ ನಿವಾರಣೆಯಾಗಬಹುದೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!