June 20, 2026

ದ. ಕ. ಹಿ. ಪ್ರಾ  ಕಂಬಳಬೆಟ್ಟು ಶಾಲೆಯಲ್ಲಿ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ

0
image_editor_output_image-1158094840-1781971222199

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಂಬಳ ಬೆಟ್ಟು ಇಲ್ಲಿ ದಿನಾಂಕ 18-6-2026ರಂದು ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ಜರುಗಿತು. ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಸಹಕಾರದೊಂದಿಗೆ ನೀಡಲ್ಪಟ್ಟ ಜಾರುಬಂಡಿ ಮತ್ತು ಮಕ್ಕಳ ಆಟೋಪಕರಣಗಳನ್ನು ಕನ್ನಡ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯಾಧ್ಯಕ್ಷರಾದ ಉನೈಸ್ ಪೆರಾಜೆ ಉದ್ಘಾಟಿಸಿದರು.

ಕೆ.ಕೆ ಅಶ್ರಫ್‌ ಶಾಂತಿನಗರ ಇವರಿಂದ ನೀಡಲ್ಪಟ್ಟ ಎಲ್‌ ಕೆಜಿ ಸ್ಮಾರ್ಟ್ ಕ್ಲಾಸ್ ಗೆ ಸಹಕಾರಿಯಾಗುವ ಟಿವಿಯನ್ನು ಮಾಸ್ಟರ್ ಹಾನಿಹ್ ಉದ್ಘಾಟಿಸಿದರು.

ಶಾಲೆಯ ಎಲ್ಲಾ 100 ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬರವಣಿಗೆಗೆ ಅಗತ್ಯವಾದ ಪುಸ್ತಕಗಳನ್ನು ಎಸ್ ಎಲ್ ವಿ ಬುಕ್ ಹೌಸ್ ಸಂಸ್ಥೆಯ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಕೊಡುಗೆಯಾಗಿ ನೀಡಿದರು ಅದನ್ನು ವಿತರಿಸಲಾಯಿತು. ಎಲ್ ಕೆ ಜಿ ವಿದ್ಯಾರ್ಥಿಗಳ ಗುರುತು ಚೀಟಿಯನ್ನು ಹಕೀಮ್ ಶಾಂತಿನಗರ ಇವರು ಕೊಡುಗೆಯಾಗಿ ನೀಡಿದ್ದು ಅದನ್ನು ವಿತರಿಸಲಾಯಿತು.

ಎಲ್ಕೆಜಿ ವಿದ್ಯಾರ್ಥಿಗಳ ಆಟೋಪಕರಣಗಳನ್ನು ಬಾತಿಶ್ ಅಳಕೆಮಜಲು ಇವರು ಕೊಡುಗೆಯಾಗಿ ನೀಡಿ ಶಾಲೆಗೆ ಹಸ್ತಾಂತರಿಸಿದರು. ಇಸ್ಮಾಯಿಲ್ ಹಾಜಿ ಬದ್ರಿಯಾ ಇವರ ವತಿಯಿಂದ ನೀಡಿರುವ ಶಾಲಾಸಮವಸ್ತ್ರವನ್ನು ವಿತರಿಸಲಾಯಿತು.

ಕೊಡುಗೆಗಳನ್ನು ನೀಡಿದ ಗಣ್ಯರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಶಾಲಾ ವಿದ್ಯಾವರ್ಧಕ ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರು ನೆರವೇರಿಸಿದರು. ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಮೀದ್ ಕೆ.ಎಸ್, ಕಂಬಳಬೆಟ್ಟು ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ ಮೇಡಂ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಶ್ರೀಪತಿ ನಾಯಕ್ ಡಿ ಸ್ವಾಗತಿಸಿದರು. ಗೌರವ ಶಿಕ್ಷಕಿ ನಿಹಾನ ವಂದಿಸಿದರು. ಶಾಲಾ ಶಿಕ್ಷಕಿ ಅಕ್ಷತಾ ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾವರ್ಧಕ ಸಮಿತಿ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯಧರ್ಶಿ ಅಬ್ದುಲ್ ಸತ್ತಾರ್, ಆಶ್ರಫ್ ಸಿಎಚ್, ಕಾರ್ಯದರ್ಶಿ ಬದ್ರುದ್ದೀನ್ ವಿಕೆ, ಕೋಶಾಧಿಕಾರಿ ಯಾಸಿರ್‌ ಕಂಬಳಬೆಟ್ಟು, ಕಾರ್ಯದರ್ಶಿ ಸುಮಿತ್ ಶೆಟ್ಟಿ ಮುಡಾಯಿಮಾರ್, ಅಬ್ದುಲ್‌ ಗಪೂರ್‌, ಶಾಳ ಶಿಕ್ಷಕರಾದ ಜರಪ್ರಭ ಕೆ. ನವ್ಯಶ್ರೀ, ಭಾಗ್ಯ ಲಕ್ಶ್ಮಿ, ಮುಬೀನ ಇವರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!