June 20, 2026

ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಸಭೆ:ಮಕ್ಕಳ ವರ್ತನೆಗೆ ಪೋಷಕರ ಗಮನ ಇರಲಿ: ವ್ರಷಭ ರಾಜ್ ಜೈನ್

0
image_editor_output_image400787593-1781971034077

ಕಲ್ಲಡ್ಕ: ಶಿಕ್ಷಕರು , ಹೆತ್ತವರು ಹಾಗೂ ಪೋಷಕರು ವಿಧ್ಯಾರ್ಥಿಗಳ ಚಲನವಲನದ ಮೇಲೆ ನಿಗಾ ಇಟ್ಟಲ್ಲಿ ಮುಂದೆ ಸಂಭವಿಸಬಹುದಾದ ದುರಂತ   ತಪ್ಪಿಸಬಹುದು ಎಂದು ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಪ್ರಥಮ ಸಭೆ ಯಲ್ಲಿ ನಿವೃತ್ತ ಶಿಕ್ಷಕರಾದ ವ್ರಷಭರಾಜ್ ಜೈನ್ ಅಭಿಪ್ರಾಯಪಟ್ಟರು.

ಅವರು ಇಂದು ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಪ್ರಥಮ ಸಭೆಯಲ್ಲಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಫಾತಿಮಾ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಜಿ. ಮಹಮ್ಮದ್ ಹನೀಫ್ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟ್‌ನ ಸಂಚಾಲಕರಾದ ಹಾಜಿ ಜಿ. ಅಹ್ಮದ್ ಮುಸ್ತಫ, ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್ ಗೋಳ್ತಮಜಲು, ಮದರಸ ಗುರುಗಳಾದ ಯಹ್ಯಾ ದಾರಿಮಿ, ಮಕ್ಕಳ ಸುರಕ್ಷಾ ಸಮಿತಿ ಸಲಹೆಗಾರರಾದ ಹಮೀದ್ ಅಲಿ , ಆಡಳಿತ ಟ್ರಸ್ಟಿ  ಅಲ್ತಾಫ್ ಅಹ್ಮದ್ ಹಾಗೂ ಮುಖ್ಯೋಪಾಧ್ಯಾಯರಾದ ನಿರಂಜನ್ ಡಿ. ಉಪಸ್ಥಿತರಿದ್ದರು.

ಸಹಶಿಕ್ಷಕಿ ಪಲ್ಲವಿ ಕೆ. ಸ್ವಾಗತಿಸಿದರು. ಭವ್ಯ ವಂದಿಸಿದರು. ತಾಹಿರಾ ಎಸ್. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಾಝಿಯ ಅವರು 10ನೇ ತರಗತಿ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೂತನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಬ್ದುಲ್ ಹಮೀದ್ ಗೋಳ್ತಮಜಲು,  ಉಪಾಧ್ಯಕ್ಷರಾಗಿ ವನಿತಾ ಮುರಬೈಲ್ ಆಯ್ಕೆಯಾಗಿದ್ದಾರೆ..

Leave a Reply

Your email address will not be published. Required fields are marked *

error: Content is protected !!