June 20, 2026

ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ವತಿಯಿಂದ ಬಡ ಕ್ಯಾನ್ಸರ್ ರೋಗಿಗೆ ಸಾಂತ್ವನದ ಮನೆ ನಿರ್ಮಾಣ: ಜೂನ್ 24ರಂದು ಉದ್ಘಾಟನೆ

0
IMG-20260620-WA0052

ವಿಟ್ಲ : ವಿಟ್ಲದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಕಾನತ್ತಡ್ಕ ಯೂಸುಫ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಮುಸ್ಲಿಮ್
ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ಕಾನತಡ್ಕ ಬದ್ರಿಯಾ ಮಸೀದಿ ಸಹಕಾರದಲ್ಲಿ ಸುಮಾರು 10 ಲಕ್ಷ ವೆಚ್ಚದ ಸಾಂತ್ವನದ ಬೀಡು ಎಂಬ ಹೆಸರಿನ ಮನೆಯನ್ನು ನಿರ್ಮಿಸಿಕೊಡಲಾಗಿದೆ.

ಯೂಸುಪ್ ಅವರು ಕೋವಿಡ್ ಕಾಲದಲ್ಲಿ ಕೆಲಸ ನಷ್ಟ ಗೊಂಡಿತ್ತು, ಅದೇ ಸಂದರ್ಭ ಅವರಿಗೆ ಶ್ವಾಸಕೋಶದಲ್ಲಿ ಕ್ಯಾನ್ಸರ್ ರೋಗಭಾದಿತರಾಗಿ ಬಹಳ ಅಸ್ವಸ್ಥಗೊಂಡಿದ್ದರು.

ಹಿಂದೆ ಗ್ಯಾಸ್ ಸ್ಪೋಟಗೊಂಡು
ಶಿಥಿಲವಾದ ಮನೆ, ಕಿತ್ತು ತಿನ್ನೋ ಬಡತನ ಅಂಗವಿಕಲವಿರುವ ಮಗಳ ದು:ಸ್ಥಿತಿಯನ್ನು ಕಂಡು ಅವರಿಗೆ ಮುಸ್ಲಿಮ್
ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ಕಾನತಡ್ಕ ಬದ್ರಿಯಾ ಮಸೀದಿ ಸಹಕಾರದಲ್ಲಿ ಸುಮಾರು 10 ಲಕ್ಷ ವೆಚ್ಚದ ಸಾಂತ್ವನದ ಬೀಡು ಎಂಬ ಹೆಸರಿನ ಮನೆಯನ್ನು ನಿರ್ಮಿಸಿಕೊಡಲಾಗಿದೆ.

ಅದರ ಉದ್ಘಾಟನೆ ಜೂನ್ 24ರಂದು ಬುಧವಾರ ಸಂಜೆ ನಡೆಯಲಿದ್ದು ಸೈಯದ್ ಮುಕ್ತಾರ್ ತಂಙಳ್ ಕುಂಬೋಲ್ ಕೀ ಹಸ್ತಾಂತರ ನಡೆಸಲಿದ್ದಾರೆ.
ಮೌಲೂದ್ ಪ್ರಾರ್ಥನೆ ಮಹಳರತುಲ್ ಬದ್ರಿಯಾ ಮಜಿಲೀಸ್ ನಡೆಯಲಿದ್ದು, ಸಯ್ಯದ್ ಹಬೀಬುಲ್ಲಾಹ್
ಪೂಕೋಯಾ ತಂಙಳ್ ಪೆರುವಾಯಿ, ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ವಾಲೆಮುಂಡೋವು ಮಹಮೂದುಲ್ ಫೈಝಿ
ಇಬ್ರಾಹಿo ಫೈಝಿ ಕನ್ಯಾನ,
ರಫೀಕ್ ಸಅದಿ ದೇಲಂಪಾಡಿ ನೇತೃತ್ವ ವಹಿಸಲಿದ್ದಾರೆ.

ಇದೇ ಸಂದರ್ಭ ವಿವಿಧ ಸಂಘಟನೆಯ ನಾಯಕರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಾಂತ್ವನದ ಬೀಡು ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಸಲೀಮ್
ಹಾಜಿ ಬೈರಿಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

Leave a Reply

Your email address will not be published. Required fields are marked *

error: Content is protected !!