ವಿಟ್ಲ: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಇದರ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ:
ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ ಇದರ2026-27 ನೇ ಸಾಲಿನ ನೂತನ ಅಧ್ಯಕ್ಷ ರು ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸ್ಥಾಪಕ ದಿನಾಚರಣೆಯು ವಿಟ್ಲ ಸಿಂಹಗಿರಿ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.



ಲಯನ್ಸ್ ಜಿಲ್ಲೆ 317-D ಇದರ ಪ್ರಥಮ ಗವರ್ನರ್ ಗೋವರ್ಧನ್ ವಿ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿ ಪದಗ್ರಹಣ ನೆರವೇರಿದರು. ಸ್ವರೂಪ ಎನ್ ಶೆಟ್ಟಿ ಸ್ಥಾಪಕ ದಿನ ನಡೆಸಿದರು. ನೂತನ ಅಧ್ಯಕ್ಷೆ ಡಾ ಗಾಯತ್ರಿ ಗೀತಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಗವರ್ನರ್ ಡಾ. ಗೀತಾಪ್ರಕಾಶ್, ಪ್ರಾಂತೀಯ ಅಧ್ಯಕ್ಷ ಆನಂದ ರೈ, ವಲಯದ ಅಧ್ಯಕ್ಷೆ ಜೆಸಿಂತಾ ಮಸ್ಕರೇನಸ್, ಮಾಜಿ ಅಧ್ಯಕ್ಷ ರಜಿತ್ ಆಳ್ವ, ಕಾರ್ಯದರ್ಶಿ ಬಾಲಕೃಷ್ಣ ಗೌಡ, ಕೋಶಾಧಿಕಾರಿ ದೇವಿಪ್ರಸಾದ್ ಶೆಟ್ಟಿ, ಗಂಗಾಧರ್, ಲಿಯೋ ಅಧ್ಯಕ್ಷೆ ಪ್ರಾಪ್ತಿ ಶೆಟ್ಟಿ, ಕಾರ್ಯದರ್ಶಿ ಸಾಗರ್ ಎನ್, ಕೋಶಾಧಿಕಾರಿ ಅನಘಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನಿಲಕಟ್ಟೆ ಶಾಲೆಗೆ ನೀರಾವರಿ ಪಂಪ್ ನೀಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಮೋನಿಶ್, ಶಾನ್, ಪ್ರಾಪ್ತಿ ಶೆಟ್ಟಿ, ದಯಾಲ್ ಇವರನ್ನು ಸನ್ಮಾನಿಸಲಾಯಿತು. ನಿರ್ಗಮನ ಅಧ್ಯಕ್ಷ ಸಂಜೀವ ಪೂಜಾರಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಜಲಜಾಕ್ಷಿ ಬಿ ವಂದಿಸಿದರು. ಸಂತೋಷ್ ಶೆಟ್ಟಿ ನಿರೂಪಿಸಿದರು. ವಿನ್ನಿ ಮಸ್ಕರೇನಸ್, ಸಿಂಧು ಎಸ್ ಶೆಟ್ಟಿ, ಶಾಂತಿ ಮಸ್ಕರೇನಸ್, ರಶ್ಮಿ ಆಳ್ವ, ಲತೀಶಾ ಲೊಬೊ, ಲಕ್ಷ್ಮಣ್ ಸಹಕರಿಸಿದರು.




