March 21, 2026

ನಾಳೆ ಕರೆ ನೀಡಿದ್ದ ಕರ್ನಾಟಕ ಬಂದ್ ವಾಪಾಸ್: ಬಸವರಾಜ ಬೊಮ್ಮಾಯಿ

0
bommai.jpg

ಬೆಂಗಳೂರು: ಮಹತ್ವದ ವಿದ್ಯಮಾನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಶುಕ್ರವಾರ, ಡಿ. 31 ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ವಾಪಾಸ್ ಪಡೆದಿವೆ.

ಬಂದ್ ಕರೆ ನೀಡಿ ಹೋರಾಟದ ನೇತೃತ್ವ ವಹಿಸಿದ್ದ ವಾಟಾಳ್ ನಾಗರಾಜ್ ಅವರು ಸಿಎಂ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿ, ಸಿಎಂ ಮನವಿ ಮಾಡಿರುವ ಹಿನ್ನಲೆಯಲ್ಲಿ ಬಂದ್ ವಾಪಾಸ್ ಪಡೆದಿದ್ದೇವೆ.

ಬಂದ್ ನಿರ್ಧಾರವನ್ನು ಸಂಘಟನೆಗಳು ಕೈ ಬಿಟ್ಟಿವೆ ಎಂದಿದ್ದಾರೆ. ಮುಖ್ಯಮಂತ್ರೀಗಳು ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್ ) ನಿಷೇಧ ಮಾಡುವ ಬಗ್ಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿಕೆ ನೀಡಿ, ನಮ್ಮ ಮಾತಿಗೆ ಹೋರಾಟಗಾರರು ಮನ್ನಣೆ ನೀಡಿದ್ದು, ಬಂದ್ ಹಿಂಪಡೆದಿದ್ದಾರೆ. ನಾಳೆ ಯಾವುದೇ ಬಂದ್ ಇರುವುದಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!