ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಬೆಂಗಳೂರು: ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಕ್ಬಾಲ್ ಹುಸೇನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರ ಆರೋಗ್ಯ ವಿಚಾರಿಸಲು ಸಿಎಂ ಡಿ.ಕೆ.ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌ಡಿಕೆ
ವೈದ್ಯ ಡಾ. ಶ್ರೀನಿವಾಸ್ ಮಾತನಾಡಿ, ರಾಮನಗರ ಎಂಎಲ್‌ಎ ಅವರು ಎದೆನೋವು ಅಂತಾ ಬಂದಿದ್ದರು. ಕಳೆದ ಎರಡು ದಿನಗಳಿಂದ ಎದೆನೋವು ಅಂತಾ ಬಂದಿದ್ದರು. ಆಂಜಿಯೋಗ್ರಾಂ ಮಾಡಿದಾಗ ಬ್ಲಾಕ್ಸ್ ಇರೋದು ಪತ್ತೆ ಆಗಿದೆ. ಹಾರ್ಟ್ ಅಟ್ಯಾಕ್ ಅಲ್ಲ, ರಕ್ತನಾಳಗಳು ಬ್ಲಾಕ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ




