ಕೊಡಂಗಾಯಿ: ಸಮವಸ್ತ್ರ ವಿತರಣೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಅಭಿನಂದನಾ ಸಮಾರಂಭ.
ವಿಟ್ಲ: ದ. ಕ. ಜಿ.ಪಂ.ಉ,ಹಿ.ಪ್ರಾ. ಶಾಲೆ ಕೊಡಂಗಾಯಿ ಇದರ 2026-27ನೇ ಶೈಕ್ಷಣಿಕ ವರ್ಷದ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದ ಉಚಿತ ಶಾಲಾ ಸಮವಸ್ತ್ರ ವಿತರಣೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಮತ್ತು ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮ
ಶಾಲಾ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಜ| ಹಮೀದ್ ಟಿ ಇವರ ಅದ್ಯಕ್ಷತೆಯಲ್ಲಿ ಜರಗಿತು.
ಶಾಲಾ ಮಕ್ಕಳ ಪ್ರಾರ್ಥನೆ ಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಉಪಾಧ್ಯಕ್ಷರಾದ ಶ್ರೀಮತಿ ವಿಮಲಾ,
ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್ ಪಳ್ಳಿಗದ್ದೆ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜ| ಅಬ್ದುಲ್ ಮಜೀದ್ ಟಿ ಎಂ, ವಿದ್ಯಾಭಿಮಾನಿಗಳಾದ ಜ|ಇಸ್ಮಾಯಿಲ್ ಶಾಲೆಬಳಿ,ಶ್ರೀ ರೋಹಿತ್ ರೈ ಚೆಂಭರಡ್ಕ,ಜ|ಹಮೀದ್ ಮೂರ್ಜೆಬೆಟ್ಟು ಹಾಗೂ ಪೋಷಕರು ಭಾಗವಹಿಸಿ ಮಕ್ಕಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ 500ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆ ತೋರಿದ ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಮಾ|ಮಹಮ್ಮದ್ ಅಝ್ಮಲ್ ಹಾಗೂ ಕು|ಶಾರಿಫಾ ಇವರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖ್ಯ ಶಿಕ್ಷಕಿ ಶ್ರೀಮತಿ ವಾಣಿಶ್ರೀ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿಯರಾದ ಶ್ರೀಮತಿ ಲೋಲಾಕ್ಷಿ ಸಹಕರಿಸಿದರು,ಶ್ರೀಮತಿ ವೇದಾವತಿ ವಂದನಾರ್ಪಣೆಗೈದರು.




