ವಿಟ್ಲ: SSLC ಪರೀಕ್ಷೆಯಲ್ಲಿ 100% ಸಾಧನೆ: ಮೀಫ್ ವತಿಯಿಂದ ಹೊರೈಝನ್ ಸ್ಕೂಲ್‌ಗೆ ಅಭಿನಂದನೆ
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಮೀಫ್ ಅಕಾಡೆಮಿಕ್ ಎಕ್ಸಲೆನ್ಸಿ ಅವಾರ್ಡ್ -2026 ಕಾರ್ಯಕ್ರಮದಲ್ಲಿ SSLC ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದ ಹೊರೈಝನ್ ಪಬ್ಲಿಕ್ ಸ್ಕೂಲ್ ನ್ನು ಅಭಿನಂದಿಸಲಾಯಿತು.
ಶಾಲೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಹಳೆಮನೆ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ರವರಿಂದ ಅಭಿನಂಧನಾ ಪತ್ರವನ್ನು ಸ್ವೀಕರಿಸಿದರು. ಶಾಲಾ ಟ್ರಸ್ಟ್ ಸದಸ್ಯರಾದ ಝುಬೈರ್ ಮಾಸ್ಟರ್, ಅಬ್ದುಲ್ ಹಮೀದ್ ಬದ್ರಿಯಾ ಹಾಗೂ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಉಪಸ್ಥಿತರಿದ್ದರು.




