ಮಂಗಳೂರು: ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಕಾವೂರು ಇನ್‌ಸ್ಪೆಕ್ಟರ್ ರಾಘವೇಂದ್ರರನ್ನು ಪಾಂಡೇಶ್ವರ ಠಾಣೆಗೆ, ಪಾಂಡೇಶ್ವರ ಇನ್‌ಸ್ಪೆಕ್ಟರ್ ಗುರುರಾಜ್‌ರನ್ನು ಕಂಕನಾಡಿ ನಗರ ಠಾಣೆಗೆ ವರ್ಗಾಯಿಸಲಾಗಿದೆ.
ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್‌ರನ್ನು ಟಿ.ಡಿ. ನಾಗರಾಜ್‌ರನ್ನು ಕದ್ರಿ ಸಂಚಾರ ಮತ್ತು ಹೆಚ್ಚುವರಿಯಾಗಿ ಕಾವೂರು ಠಾಣೆಗೆ ವರ್ಗಾಯಿಸಲಾಗಿದೆ. ಮೋಹನ್ ಕೊಟ್ಟಾರಿ ನಿವೃತ್ತಿಯಿಂದ ತೆರವಾದ ಬರ್ಕೆ ಠಾಣೆಗೆ ಕದ್ರಿ ಇನ್‌ಸ್ಪೆಕ್ಟರ್ ಅನಂತ ಪದ್ಮನಾಬ್‌ರನ್ನು ಮಂಜುನಾಥ್‌ರ ವರ್ಗಾವಣೆಯಿಂದ ತೆರವಾದ ಮುಲ್ಕಿ ಠಾಣೆಗೆ ಸುರತ್ಕಲ್ ಇನ್‌ಸ್ಪೆಕ್ಟರ್ ಪ್ರಮೋದ್‌ರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.




