ಮಲ್ಪೆ: ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಮಹಿಳೆ ಸಾವು
ಉಡುಪಿ: ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು 74 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪ್ರದೇಶದ ಬಡನಿಡಿಯೂರು ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಬಡನಿಡಿಯೂರು ನಿವಾಸಿ ಶಾಲ್ಫಿನ್ ಫೆರ್ನಾಂಡಿಸ್ (47) ಅವರ ಮಗ ನೀಡಿದ ದೂರಿನ ಪ್ರಕಾರ, ಅವರ ತಾಯಿ ಆಲಿಸ್ ಡಿ’ಸೋಜಾ (74) ಜೂನ್ 7 ರಂದು ಬೆಳಿಗ್ಗೆ 11.00 ರ ಸುಮಾರಿಗೆ ಬಟ್ಟೆ ಒಗೆದು ಒಣಗಿಸಲು ಹೋದಾಗ ಸೆಪ್ಟಿಕ್ ಟ್ಯಾಂಕ್ ಅನ್ನು ಆವರಿಸಿದ್ದ ಕಲ್ಲಿನ ಚಪ್ಪಡಿಯ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಚಪ್ಪಡಿಯಿಂದ ಕಾಲು ತಪ್ಪಿ ಟ್ಯಾಂಕ್‌ಗೆ ಬಿದ್ದು ತುಂಡಾದ ಕಾಂಕ್ರೀಟ್ ನಡುವೆ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ.
ಕುಟುಂಬ ಸದಸ್ಯರು ಶಾಲ್ಫಿನ್ ಫೆರ್ನಾಂಡಿಸ್ ತುಂಬಾ ಹೊತ್ತು ಕಾಣದೆ ಇದ್ದಾಗ ಹುಡುಕಲು ಆರಂಭಿಸಿದಾಗ ಸೆಪ್ಟಿಕ್ ಟ್ಯಾಂಕ್ ಒಳಗೆ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಸ್ಥಳೀಯ ನಿವಾಸಿ ಈಶ್ವರ್ ಮಲ್ಪೆ ಅವರ ಸಹಾಯದಿಂದ ಬೆಳಿಗ್ಗೆ 11.40 ರ ಸುಮಾರಿಗೆ ಮಹಿಳೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ, ಆ ಹೊತ್ತಿಗೆ ಆಗಾಗಲೇ ಮಹಿಳೆ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.




