July 28, 2026

ರಸ್ತೆ ಅಪಘಾತ: ಸಂಭ್ರಮಾಚರಣೆ ಮುಗಿಸಿ ಮನೆಗೆ ಬರ್ತಿದ್ದ RCB ಅಭಿಮಾನಿ ಸಾವು

0
image_editor_output_image307786169-1780388903744.jpg

ನೆಲಮಂಗಲ: ಆರ್‌ಸಿಬಿ ಸತತ 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದು, ಸಂಭ್ರಮಾಚರಣೆ ಮುಗಿಸಿ ಮನೆಗೆ ವಾಪಸ್‌ ಬರುತ್ತಿದ್ದ ಅಭಿಮಾನಿಯೊಬ್ಬ ಸಾವಿಗೀಡಾಗಿರುವ ಘಟನೆ ನಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಲಕ್ಷ್ಮೀಪುರ ಗ್ರಾಮದ ಬಳಿ 2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. ಮನೋಜ್ (21) ಮೃತ ಯುವಕ.

ಮೃತ ಮನೋಜ್‌ ಚಿತ್ರದುರ್ಗ ಮೂಲದ ನಿವಾಸಿಯಾಗಿದ್ದು, ಮಾಕಳಿಯ ಹೆಗ್ಗಡದೇವನಪುರದಲ್ಲಿ ರೂಮ್‌ ಮಾಡಿಕೊಂಡು ವಾಸವಿದ್ದ. ಖಾಸಗಿ ಕಂಪನಿಯಲ್ಲಿ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಮ್ಯಾಚ್‌ ಮುಗಿಸಿಕೊಂಡು ವಾಪಸ್‌ ತನ್ನ ರೂಮಿಗೆ ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಈ ಘಟನೆ ಸಂಬಂಧ ಚಿಕ್ಕಬಾಣಾವರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಇನ್ನೂ ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *

You may have missed

error: Content is protected !!