May 29, 2026

ಮದುವೆಯಾಗಿ 6 ತಿಂಗಳಲ್ಲೇ ಯುವತಿ ನೇಣು ಬಿಗಿದು ಆತ್ಮಹತ್ಯೆ

0
image_editor_output_image157420902-1780057649862.jpg

ಲಕ್ನೋ: ಮದುವೆಯಾಗಿ ಕೇವಲ 6 ತಿಂಗಳಲ್ಲೇ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

26 ವರ್ಷದ ಶ್ವೇತಾ ಸಿಂಗ್ ಮೃತ ಗೃಹಿಣಿ. ಮದುವೆಯಾದ ಮೊದಲ ದಿನದಿಂದಲೇ ಗಂಡನ ಮನೆಯವರು ವರದಕ್ಷಿಣೆ ವಿಚಾರವಾಗಿ ಶ್ವೇತಾಳಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಶ್ವೇತಾ ಸಿಂಗ್ 2025ರ ನವೆಂಬರ್ 22ರಂದು ಭೂಪೇಂದ್ರ ಸಿಂಗ್‌ನನ್ನು ವಿವಾಹವಾಗಿದ್ದಳು. ಮದುವೆಯ ದಿನವೇ ವರ ಹಾಗೂ ಅವರ ತಂದೆ 10 ಲಕ್ಷ ರೂ. ಮತ್ತು ಸ್ಕಾರ್ಪಿಯೋ ಕಾರು ಬೇಡಿಕೆ ಇಟ್ಟಿದ್ದರು ಎಂದು ಶ್ವೇತಾ ಸಹೋದರಿಯರಾದ ಕೋಮಲ್ ಮತ್ತು ಜ್ಯೋತಿ ಆರೋಪಿಸಿದ್ದಾರೆ. ಮದುವೆಯ ನಂತರ ಹೆಣ್ಣನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ಶ್ವೇತಾ ತಂದೆ ಉಮೇಶ್ ಕುಮಾರ್ ಸಿಂಗ್ ಅವರು ಕೈಮುಗಿದು ಬೇಡಿಕೊಂಡರೂ ಗಂಡನ ಮನೆಯವರು ಒಪ್ಪಲಿಲ್ಲ ಎಂದು ಕುಟುಂಬ ಹೇಳಿದೆ.

Leave a Reply

Your email address will not be published. Required fields are marked *

error: Content is protected !!