ಜಾಮೀನಿನ ಮೇಲೆ ಜೈಲಿಂದ ರಿಲೀಸ್: ಅತ್ಯಾಚಾರ ಆರೋಪಿಗೆ ಹೂವಿನ ಹಾರ ಹಾಕಿ ಅದ್ದೂರಿ ಮೆರವಣಿಗೆ
ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಗೆ ಹೂವಿನ ಹಾರ ಹಾಕಿ ಅದ್ದೂರಿ ಮೆರವಣಿಗೆ ಮಾಡಿರುವ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಹಿಂದೂ ಯುವ ವಾಹಿನಿಯ ಮಾಜಿ ಸದಸ್ಯ ಸುಶೀಲ್ ಪ್ರಜಾಪತಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ರಿಲೀಸ್ ಆದ ಆತನನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.





