May 21, 2026

ಮಸೀದಿಯ ಸಮಾನತೆಗೆ ಆಕರ್ಷಿತನಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡೆ: ತಮಿಳು ನಟ ಜೈ

0
image_editor_output_image1112859951-1779353641116.jpg

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಜೈ ಅಲಿಯಾಸ್ ಜೈ ಸಂಪತ್ ತಾವು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ‘ಗಲಾಟಾ ಪ್ಲಸ್’ ಡಿಜಿಟಲ್ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ಈ ಧಾರ್ಮಿಕ ಪಯಣದ ಹಿಂದಿನ ನೈಜ ಕಾರಣಗಳು ಹಾಗೂ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ತಮ್ಮ ನಿರ್ಧಾರದ ಕುರಿತು ಮಾತನಾಡಿದ ನಟ ಜೈ, “ನಾನು ಈ ಹಿಂದೆ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಧರ್ಮಗಳ ಆಚರಣೆಗಳನ್ನು ಪಾಲಿಸುತ್ತಿದ್ದೆ. ಶಬರಿಮಲೆಗೂ ಮಾಲೆ ಧರಿಸಿ ಹೋಗಿದ್ದೆ. ಎಲ್ಲಾ ದೇವರುಗಳೂ ಒಂದೇ ಎಂಬ ಭಾವನೆ ನನ್ನದಾಗಿತ್ತು. ಆದರೆ, ಕೆಲವು ದೇವಾಲಯಗಳಲ್ಲಿ ನನಗೆ ತೀವ್ರ ಅವಮಾನ ಹಾಗೂ ನಿರೀಕ್ಷಿಸದ ಕಹಿ ಘಟನೆಗಳು ಎದುರಾದವು. ಇಂತಹ ಅನುಭವಗಳು ಪದೇ ಪದೇ ಮರುಕಳಿಸಿದಾಗ ಬೇಸತ್ತು, ಒಂದು ದಿನ ನಾನು ಮಸೀದಿಗೆ ಭೇಟಿ ನೀಡಿದೆ” ಎಂದು ಹೇಳಿದ್ದಾರೆ.

ಮಸೀದಿಯ ಒಳಗಿನ ವಾತಾವರಣ ತಮಗೆ ತಂದ ಬದಲಾವಣೆಯನ್ನು ವಿವರಿಸುತ್ತಾ, “ನಾನು ಮೊದಲ ಬಾರಿಗೆ ಮಸೀದಿಗೆ ಹೋದಾಗ ಅಲ್ಲಿದ್ದ ಎಲ್ಲರಿಗೂ ನಾನು ಸಿನಿಮಾ ನಟ ಎಂಬುದು ತಿಳಿದಿತ್ತು. ಆದರೆ ಪ್ರಾರ್ಥನೆಯ ಸಮಯದಲ್ಲಿ ಯಾರೂ ನನ್ನ ಜೊತೆ ಮಾತನಾಡಲು ಬರಲಿಲ್ಲ ಅಥವಾ ಸೆಲ್ಫಿಗಾಗಿ ಮುಗಿಬೀಳಲಿಲ್ಲ. ಪ್ರಾರ್ಥನೆ ಮುಗಿಸಿ ಹೊರಬಂದ ನಂತರವಷ್ಟೇ ಎಲ್ಲರೂ ಪ್ರೀತಿಯಿಂದ ಮಾತನಾಡಿಸಿದರು. ಮಸೀದಿಯ ಒಳಗೆ ಎಲ್ಲರೂ ಸಮಾನರು, ಅಲ್ಲಿ ಯಾರೂ ಸೆಲೆಬ್ರಿಟಿಗಳಲ್ಲ ಎಂಬ ಇಸ್ಲಾಂ ಧರ್ಮದ ಈ ತತ್ವ ಮತ್ತು ಅಲ್ಲಿ ಸಿಕ್ಕ ಪ್ರಶಾಂತತೆ ನನ್ನ ಸ್ವಭಾವವನ್ನೇ ಸಂಪೂರ್ಣವಾಗಿ ಬದಲಾಯಿಸಿತು” ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!