May 19, 2026

ನೆಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿ 2 ವರ್ಷದ ಮಗು ಸಾವು

0
image_editor_output_image-1119214499-1779171930122.jpg

ಕೋಲಾರ : ಬೆಟ್ಟದ ನೆಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದಿದೆ.

ಮಾಲೂರಿನ ಗಾಂಧಿ ಸರ್ಕಲ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿಗಳಾದ ರವಿ ಹಾಗೂ ಮಾಲಾ ದಂಪತಿಯ ಎರಡು ವರ್ಷದ ಮಗ, ವಿಜಯೇಂದ್ರ (2) ಮೃತಪಟ್ಟಿದ್ದಾರೆ.

ಮನೆಯಲ್ಲಿ ಮಗು ಬೆಟ್ಟದ ನೆಲ್ಲಿಕಾಯಿ ಬಾಯಿಗೆ ಹಾಕಿಕೊಂಡಿದ್ದಾನೆ. ನೆಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿಕೊಂಡ ಹಿನ್ನೆಲೆ, ಪೋಷಕರು ಕೂಡಲೇ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ, ಮಗು ಮೃತಪಟ್ಟಿದೆ.

ಮಾಲೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!