May 12, 2026

ಅಪರೂಪದ ಶಸ್ತ್ರ ಚಿಕಿತ್ಸೆ: ಹಾಸನದ ಜನಪ್ರಿಯ ಆಸ್ಪತ್ರೆ ಮತ್ತೊಂದು ದಾಖಲೆ

0
image_editor_output_image-325290149-1778568489836.jpg

ಹಾಸನ: ಇತ್ತೀಚಿಗೆ ಕೊಣ ನೂರಿನ ಸಮೀಪ ಬೈಕ್‌ ನಲ್ಲಿ ಬರುವಾಗ ಅಪಘಾತವಾಗಿ ತುಂಬಾ ರಕ್ತಸ್ರಾವವಾಗಿ ಯುವಕನು ಸಾಯುವ ಹಂತ ದಲ್ಲಿದ್ದಾಗ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲು ಕೇಳಿದಾಗ ಯುವಕನು ಉಳಿ ಯುವುದಿಲ್ಲ ಎಂದು ವೈದ್ಯರು ತಿಳಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲು ಮಾಡಿದಾಗ, ಯುವಕನ ತಲೆ ಬುರುಡೆ ಪುಡಿಪುಡಿಯಾಗಿ ಮೆದುಳು ಕೂಡ ಹೊರ ಬಂದಿದ್ದು ಮತ್ತು ಕೈ ಮತ್ತು ಕಾಲು ಮೂಳೆ ಕೂಡ ಮುರಿದಿದ್ದಾಗ ಆಸ್ಪತ್ರೆ ವೈದ್ಯರು ಶ್ರಮವಹಿಸಿ ಶಸ್ತ್ರ ಚಿಕಿತ್ಸೆ ಮಾಡಿ ರೋಗಿಯನ್ನು ಉಳಿಸಿ ಮತ್ತೊಂದು ದಾಖಲೆ ಮಾಡಿದ್ದಾರೆ.

ಅಪಘಾತದ ಕುರಿತು ಯುವಕನ ಪೋಷಕರಾದ ಮಂಜುನಾಥ್ ರವರನ್ನು ಕೇಳಿದಾಗ ದೇವರ ಆಶೀರ್ವಾ ದದಿಂದ ನನ್ನ ಮಗನಿಗೆ

ನಾವು ಮೊದಲು ಜನ್ಮ ನೀಡಿದ್ದೇವೆ, ಇವಾಗ ವೈದ್ಯರು ಅವನಿಗೆ ಪುನರ್ಜನ್ಮ ನೀಡಿ ಕಾಪಾಡಿದ್ದಾರೆ ಅವರಿಗೆ ನನ್ನ ಭಕ್ತಿ ಪೂರ್ವಕ ಧನ್ಯವಾದಗಳು, ಮೊದಲು ನನ್ನ ಮಗನು ಉಳಿಯುವುದು ಶೇಕಡ ಒಂದರಷ್ಟು ಎಂದು ತಿಳಿಸಿದರು, ನಾವು ಅವರನ್ನು ಕೇಳಿಕೊಂಡು ನಿಮ್ಮ ಚಿಕಿತ್ಸೆ ನೀವು ನೀಡಿ ನಮ್ಮ ಮಗನ ಪ್ರಾಣವನ್ನು ಉಳಿಸಿ ಬೇಕೆಂದು ಕೇಳಿಕೊಂಡವು. ಜನಪ್ರಿಯ ಆಸ್ಪತ್ರೆ ವೈದ್ಯರು ಶಕ್ತಿ ಮೀರಿ ಪ್ರಯತ್ನ ಮಾಡಿ, ಶ್ರುತಿಷಕರು ಮತ್ತು ಸಿಬ್ಬಂದಿಗಳ

ಪರಿಶ್ರಮದಿಂದ ಮಗನು ಇಂದು ನಮ್ಮ ಜೊತೆ ಮಾತನಾಡುವ ಆಗಿದೆ ಮತ್ತೊಮ್ಮೆ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಗಳು ತಿಳಿಸಿದರು.

ಅಪಘಾತದ ಕುರಿತು ಜನಪ್ರಿಯ ಆಸ್ಪತ್ರೆ ಮುಖ್ಯಸ್ಥರು ಮತ್ತು ಕೀಲು ಮತ್ತು ಮೂಳೆ ತಜ್ಞರಾದ ಡಾ.ವಿ.ಕೆ.ಅಬ್ದುಲ್ ಬಶೀರವರು ಮಾತನಾಡಿ ಯುವಕನು ಯಾವುದೋ ಮದುವೆಯ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರು ಗುತ್ತಿರುವಾಗ ಅಪಘಾತವಾಗಿ ಯುವಕನ ತಲೆ ಬುರುಡೆ ಪುಡಿ ಪುಡಿಯಾಗಿ ಮೆದುಳು ಹೊರಗೆ ಬಂದಿತ್ತು, ಕಲ್ಲು ಮಣ್ಣು ಎಲ್ಲ ಮೆದುಳಿನ ಒಳಗೆ ಪದರವನ್ನು ಸೇರಿತ್ತು ಮತ್ತು ಕೈ ಮತ್ತು ಕಾಲು ಮುರಿದು, ಗಾಯಾಳು ಆಸ್ಪತ್ರೆಗೆ ದಾಖಲಾದಾಗ ಹೃದಯ ಬಡಿತವು ನಿಂತಿದ್ದು, ನಾಡಿ ಮಿಡಿತ ಕೂಡ ಇರಲಿಲ್ಲ, ತಕ್ಷಣಕ್ಕೆ ಹೃದಯಕ್ಕೆ ವಿದ್ಯುತ್ ಚಾಲಿತ ಡಿ-ಫಿಬ್ರಿಲೇಟರ್ ಯಂತ್ರವನ್ನು ಉಪಯೋಗಿಸಿ ಹೃದಯ ಬಡಿತ ಬರುವ ಹಾಗೆ ಮಾಡಿ ಮತ್ತು 8 ರಿಂದ 10 ಬಾಟಲ್ ರಕ್ತವನ್ನು ನೇರವಾಗಿ ಹೃದಯಕ್ಕೆ ಪೈಪ್ ಹಾಕಿ ನೀಡಲಾಯಿತು.

ಆ ಮೂಲಕ ರಕ್ತದ ಒತ್ತಡ ಬರುವ ಹಾಗೆ ಮಾಡಲಾಯಿತು, ಆದಾದ ನಂತರ ಗಾಯಾಳು ಒಂದು ಪ್ರತಿಶತ ಉಳಿಯುವ ಸಾಧ್ಯತೆ ಎಂದು ಯುವಕನ ಪೋಷಕರ ಹತ್ತಿರ ಮಾತನಾಡಿ ಯುವಕನ ಪರಿಸ್ಥಿತಿಯನ್ನು ವಿವರವಾಗಿ ತಿಳಿಸಿ, ಅವರ ಒಪ್ಪಿಗೆಯನ್ನು ಪಡೆದು ಶಸ್ತ್ರ ಚಿಕಿತ್ಸೆಯನ್ನು ನಾವೆಲ್ಲರೂ ಸೇರೆ ಮಾಡಿ ದೇವರ ಆಶೀರ್ವಾದ ದೊಂದಿಗೆ ಯಶಸ್ವಿಯಾಗಿದ್ದೇವೆ. ಸುಮಾರು ಮೂರು ವಾರಗಳ ಕೃತಕ ಉಸಿರಾಟದ ಯಂತ್ರದಲ್ಲಿ

ಇದ್ದರು. ಐದರಿಂದ ಆರು ಶಸ್ತ್ರಚಿಕಿತ್ಸೆಯ ನಂತರ ಪುನರ್ಜನ್ಮವನ್ನು ಪಡೆದರು. ಸುಮಾರು ಒಂದುವರೆ ತಿಂಗಳುಗಳ ನಂತರ ಯಾರ ಸಹಾಯವಿಲ್ಲದೆ ನಡೆಯುವಂತಾ ದರೂ ಹಾಗೂ ಮಾತನಾಡಲು ಆರಂಭಿಸಿದರು.

ಈ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಲು ಯುವಕನ ತಂದೆ ಮತ್ತು ತಾಯಿ ವೈದ್ಯ ರೊಂದಿಗೆ ನೀಡಿದ ಸಹಕಾರ ಬಹು ಮುಖ್ಯ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಯಶಸ್ವಿ ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಕೀಲು ಮತ್ತು ಮೂಳೆ ತಜ್ಞರಾದ ಡಾ. ಅಬ್ದುಲ್ ಬಶೀರ್ ರವರ ಮುಂದಾಳತ್ವದಲ್ಲಿ, ಹಿರಿಯ ನರರೋಗ ಶಸ್ತ್ರಚಿಕಿತ್ಸೆಕರಾದ ಡಾ. ಶ್ರೀಚೇತನ್ಯ, ಡಾ. ಹರ್ಷ ಸುರೇಶ್, ಅರವಳಿಕೆ ತಜ್ಞರಾದ ಡಾ. ಸುಹಾಸ್, ಐಸಿಯು ತಜ್ಞರಾದ ಡಾ. ಮನೋಜ್ ಮತ್ತು ಸಿಬ್ಬಂದಿಗಳ ಸಹಕಾರ ದೊಂದಿಗೆ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗಿ ನಡೆದು ರೋಗಿಯು ನಡೆದಾಡುವಂತಾಯಿತು.

Leave a Reply

Your email address will not be published. Required fields are marked *

error: Content is protected !!