May 4, 2026

ಕಾಸರಗೋಡು ವಿಧಾನಸಭಾ ಕ್ಷೇತ್ರ: ಯುಡಿಎಫ್ ಅಭ್ಯರ್ಥಿಗೆ 22,698 ಮತಗಳ ಅಂತರದಿಂದ ಗೆಲುವು

0
image_editor_output_image-829344282-1777885673479.jpg

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಕಲ್ಲಟ್ರ ಮಾಹಿನ್ ಹಾಜಿಯವರು ತನ್ನ ಸಮೀಪದ ಪ್ರತಿಸ್ಪರ್ಧಿ, ಎನ್ ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿಯವರನ್ನು 22,698 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಎಲ್ಲಾ 16 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಾಗ ಕಲ್ಲಟ್ರ ಮಾಹಿನ್ ಹಾಜಿ 76,396 ಮತಗಳನ್ನು ಗಳಿಸಿದ್ದರೆ, ಎಂ.ಎಲ್. ಅಶ್ವಿನಿ 53,698 ಗಳಿಸಲಷ್ಟೇ ಶಕ್ತರಾಗಿದ್ದಾರೆ. ಎಲ್‌ ಡಿಎಫ್ ಅಭ್ಯರ್ಥಿ ಶಾನ್ ವಾಝ್ ಪಾದೂರು 36,678 ಮತಗಳನ್ನು ಗಳಿಸಿ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಚುನಾವಣೆ ಆಯೋಗವು ಕಲ್ಲಟ್ರ ಮಾಹಿನ್ ಹಾಜಿಯವರ ಗೆಲುವನ್ನು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!