ಕಾಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ 10 ಸುತ್ತುಗಳ ಮತ ಎಣಿಕೆ: ಎಲ್.ಡಿ.ಎಫ್. ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ ಮುನ್ನಡೆ
ಕಾಸರಗೋಡು: ಕಾಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ 10 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು, ಎಲ್ ಡಿಎಫ್ 14,800 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನು ಒಂಭತ್ತು ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಎಲ್.ಡಿ.ಎಫ್. ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ 46,815 ಮತಗಳನ್ನು ಗಳಿಸಿದ್ದರೆ, ಅವರಿಗೆ ಪ್ರತಿಸ್ಪರ್ಧೆ ನೀಡುತ್ತಿರುವ ಯುಡಿಎಫ್ ಅಭ್ಯರ್ಥಿ ಶೈಜಿ ಓಟಪಲ್ಲಿ 32,015 ಮತಗಳನ್ನು ಗಳಿಸಿದ್ದಾರೆ. ಎನ್ ಡಿಎ ಅಭ್ಯರ್ಥಿ ಎಂ.ಬಲರಾಜ್ 16,595 ಮತ ಗಳಿಸಿದ್ದಾರೆ.





