ವಿಟ್ಲ ಕೇಂದ್ರ ಜುಮಾ ಮಸೀದಿ-ಯೂತ್ ವಿಂಗ್ ನೇತೃತ್ವದಲ್ಲಿ ಮಜ್ಲಿಸ್ ನ್ನೂರ್ ವಾರ್ಷಿಕ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಹಾಗೂ ಯೂತ್ ವಿಂಗ್ ವತಿಯಿಂದ ಮಜ್ಲಿಸ್ ನ್ನೂರ್ ವಾರ್ಷಿಕ ಮೂರು ದಿನಗಳ ಮತಪ್ರವಚನದೊಂದಿಗೆ ನಡೆಯಿತು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು ವಹಿಸಿದ್ದರು. ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಪೇರೋಡ್ ಮಹಮ್ಮದ್ ಅಝ್ಹರಿ, ಹನೀಫ್ ನಿಝಾಮಿ ಹಾಗೂ ಇ.ಪಿ.ಅಬೂಬಕರ್ ಖಾಸಿಮಿ ಪತ್ತನಾಪುರಂ ಮುಖ್ಯ ಮತಪ್ರವಚನಗಾರರಾಗಿ ಆಗಮಿಸಿದ್ದರು.
ಉಕ್ಕುಡ ಜುಮಾ ಮಸೀದಿ ಮುದರ್ರಿಸ್ ಹಾಫಿಳ್ ಮಹಮ್ಮದ್ ಶರೀಫ್ ಕಾಮಿಲ್ ಸಖಾಫಿ, ಅಧ್ಯಕ್ಷ ಮುನೀರ್ ದರ್ಬೆ, ಕಡಂಬು ಮಸೀದಿ ಖತೀಬ್ ಅಬ್ದುಲ್ ರಹಿಮಾನ್ ಸಅದಿ, ಕೆಲಿಂಜ ಖತೀಬ್ ಮಹಮ್ಮದ್ ಇರ್ಫಾನಿ ಫೈಝಿ, ಕಲ್ಲೇಗ ಮಸೀದಿ ಖತೀಬ್ ಹಸನ್ ಅರ್ಷದಿ, ಲಿಮ್ರಾ ಎಜು ಗ್ರೂಪ್ ಕರ್ನಾಟಕದ ಶೈಖ್ ಮಹಮ್ಮದ್ ಇರ್ಫಾನಿ ಫೈಝಿ, ಮಸೀದಿ ಉಪಾಧ್ಯಕ್ಷರಾದ ವಿ.ಎಸ್.ಇಬ್ರಾಹಿಂ ಹಾಗೂ ಮಹಮ್ಮದ್ ಗಮಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಮದರಸ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಪರ್ತಿಪ್ಪಾಡಿ, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಯೂತ್ ವಿಂಗ್ ಉಪಾಧ್ಯಕ್ಷರಾದ ಮಹಮ್ಮದ್ ಅಲಿ, ಬಾತಿಷ್ ಮೇಗಿನಪೇಟೆ, ನಾಪಿ ಕುಂಡಡ್ಕ, ನಮೀರ್ ಹಳೆಮನೆ, ಇರ್ಷಾದ್ ಬಿ.ಕೆ. ಮುಂತಾದವರು ಉಪಸ್ಥಿತರಿದ್ದರು.
ಖತೀಬ್ ಆರಿಫ್ ಬಾಖವಿ ಸ್ವಾಗತಿಸಿದರು. ಕೆ.ಎಂ.ಎ.ಕೊಡಂಗಾಯಿ ನಿರೂಪಿದರು.





