April 10, 2026

ಎಪ್ರಿಲ್ 11 ಶನಿವಾರ ವಿಟ್ಲ ಕಜೆ ಡೆಂಟಲ್ ಕೇರ್ ಸ್ಥಳಾಂತರಗೊಂಡು ಉದ್ಘಾಟನೆ: 25ವರ್ಷಗಳನ್ನು ಪೂರೈಸಿದ ಕಜೆ ಡೆಂಟಲ್ ಕೇರ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹರಿಹರ ಕಾಂಪ್ಲೆಕ್ಸ್ ಗೆ  ಸ್ಥಳಾಂತರ

0
image_editor_output_image1233942670-1775757919701

ವಿಟ್ಲ: ವಿಟ್ಲ ಕಜೆ ಡೆಂಟಲ್ ಕೇರ್ ವಿಟ್ಲದ ಮಂಗಳೂರು ರಸ್ತೆಯ ಹರಿಹರ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಉದ್ಘಾಟನಾ ಸಮಾರಂಭ ಎಪ್ರಿಲ್ 11 ಶನಿವಾರ ಬೆಳಿಗ್ಗೆ ನಡೆಯಲಿದೆ.

ವಿಟ್ಲದ ಪುತ್ತೂರು ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕಜೆ ಡೆಂಟಲ್ ಕೇರ್ 25 ವರ್ಷಗಳನ್ನು ಪೂರೈಸಿದ್ದು, ಮತ್ತಷ್ಟು ಸ್ಥಳಾವಕಾಶ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸ್ಥಳಾಂತರಗೊಳ್ಳಲಿದೆ.

ವಾಸ್ತು ತಜ್ಞರಾದ ಪ್ರಸನ್ನ ಭಟ್ ಮುಳಿಯಾಲ ಉದ್ಘಾಟಿಸಲಿದ್ದಾರೆ. ಪುಷ್ಪಕ್ ಹೆಲ್ತ್ ಸೆಂಟರ್ ನ ಡಾ. ವಿ ಕೆ ಹೆಗ್ಡೆ, ಉದ್ಯಮಿ ಸುಬ್ರಾಯ ಪೈ, ಕರ್ನಾಟಕ ರಾಜ್ಯ ದಂತ ವೈದ್ಯಕೀಯ ಸಂಘದ ನಿಯೋಜಿತ ಅಧ್ಯಕ್ಷ ಡಾ. ರಾಘವೇಂದ್ರ ಪಿದಮಲೆ, ವಿಠ್ಠಲ್ ಕನ್ ಸ್ಟ್ರಕ್ಷನ್ ನ ಸುರೇಶ್ ಬನಾರಿ, ಎಂ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಡಾ. ಚರಣ್ ಕಜೆ ಮತ್ತು ಡಾ.ರಮ್ಯ ಕಜೆ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!