April 9, 2026

ದ್ವಿತೀಯ ಪಿಯುಸಿ ಫಲಿತಾಂಶ:  ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜ್ ಗೆ ಶೇ. 100 ಫಲಿತಾಂಶ

0
image_editor_output_image1330621972-1775739437122

ದ್ವಿತೀಯ ಪಿಯುಸಿ 2025-26ನೇ ಸಾಲಿನ  ವಾರ್ಷಿಕ ಪರೀಕ್ಷೆಯಲ್ಲಿ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ ಕುಮಾರಿ ಫಾತಿಮತ್ ಶಹೀಮಾ 585 ಅಂಕಗಳನ್ನು ಪಡೆದು,
ವಿಜ್ಞಾನ ವಿಭಾಗದ ಕುಮಾರಿ ರಿಹಾ ಹವ್ವ 585 ಅಂಕಗಳನ್ನು ಪಡೆದು, ಕಲಾ ವಿಭಾಗದ ಕುಮಾರಿ  ಫಾತಿಮಾ ತಸ್ಮೀನ್ 512 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಾಗಿರುತ್ತದೆ. ವಾಣಿಜ್ಯ ವಿಭಾಗದ  33 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರೆ, 46 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, 1 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಫಾತಿಮತ್ ಶಹೀಮಾ ವ್ಯವಹಾರ ಅಧ್ಯಯನ ,ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ ,ಅರ್ಥಶಾಸ್ತ್ರ ಹಾಗೂ ಕನ್ನಡ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾರೆ, ಆಯಿಷತ್ ಶಿಫಾ,ಆಯಿಷತ್ ಮೆಹರೂಫ ಹಾಗೂ ನಾಫಿಯಾ ವ್ಯವಹಾರ ಅಧ್ಯಯನದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುತ್ತಾರೆ. ಕಲಾ ವಿಭಾಗದಲ್ಲಿ ಶೇಕಡ 100  ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗದ ಓರ್ವ ವಿದ್ಯಾರ್ಥಿನಿ ವಿಶಿಷ್ಟ ಶ್ರೇಣಿಯಲ್ಲಿ,13 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ,2 ದ್ವಿತೀಯ ಶ್ರೇಣಿ, 1 ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100% ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗದ 18 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ 18 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.  ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದದವರು ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!