ಬೈಕ್‌ಗೆ ಮಿನಿ ಕೂಪರ್ ಕಾರು ಢಿಕ್ಕಿ: ಯುವತಿ ಸಾವು
ಪಣಜಿ: ಬೈಕ್‌ಗೆ ಮಿನಿ ಕೂಪರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ಗೋವಾದ ಬಂಬೋಲಿಮ್-ಡೋನಾ ಪೌಲಾ ರಸ್ತೆಯಲ್ಲಿ ಎಪ್ರಿಲ್ 7ರಂದು ನಡೆದಿದೆ.
ಮೃತ ಯುವತಿಯನ್ನು ದಿಕ್ಷಾ ಪರ್ವಾಡ್ಕರ್ (23) ಎಂದು ಗುರುತಿಸಲಾಗಿದೆ. ಸಹೋದ್ಯೋಗಿ ಡಿ.ಅರುಣ್‌ಕುಮಾರ್ (26) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಕಾರು ಚಾಲಕ ಡೇರಿಯಸ್ ಡಯಾಸ್‌ನನ್ನು ಬಂಧಿಸಲಾಗಿದ್ದು, ಗೋವಾದಲ್ಲಿ ಬೇಕರಿ, ಹೋಟೆಲ್‌ಗಳನ್ನು ಹೊಂದಿರುವ ಉದ್ಯಮಿ ಆಂಡ್ರ‍್ಯೂ ಡಯಾಸ್ ಅವರ ಪುತ್ರ ಎಂದು ತಿಳಿದುಬಂದಿದೆ.




