April 5, 2026

ಮಂಗಳೂರು:  “ಬ್ರೇಸ್ ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್  ಶುಭಾರಂಭ: ಕಂಕನಾಡಿ ಗೇಟ್ ಸಂಕೀರ್ಣದಲ್ಲಿ ಚಾಲನೆ ಸ್ಪೀಕರ್ ಯು.ಟಿ ಖಾದರ್

0
image_editor_output_image815214617-1775390666833

ಮಂಗಳೂರು:  ಬ್ರೇಸ್ ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್, ಆರ್ಥೊಡಾಂಟಿಕ್ಸ್ ಆಂಡ್ ಇಂಪ್ಲಾಂಟ್ ಸೆಂಟರ್ ಮಂಗಳೂರಿನ ಕಂಕನಾಡಿ ಗೇಟ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು.

ನೂತನ ಕ್ಲಿನಿಕ್ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿದ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ರವರು ಮಾತನಾಡಿ ಬ್ರೇಸ್ ಮ್ಯಾಕ್ಸ್ ಕ್ಲಿನಿಕ್ ನ ಡಾಕ್ಟರ್ ಆಶ್ರಫ್ ಕೂಡಾಜೆ ಮತ್ತು ಪತ್ನಿ ಡಾಕ್ಟರ್ ಮೆಹ್ನಾಝ್ ಕೊಡಾಜೆ ರವರು ಬೆಂಗಳೂರು ಮತ್ತು ವಿದೇಶದಲ್ಲಿ ಅಪಾರ ಅನುಭವ ಹೊಂದಿದ್ದು ಮಂಗಳೂರು ನಗರದಲ್ಲಿ ತಮ್ಮ ಸೇವೆಯನ್ನು ಆರಂಭಿಸುವ ಮೂಲಕ ಇನ್ನೂ ಪ್ರಸಿದ್ಧರಾಗಲಿ ಮತ್ತು ಇವರ ಕ್ಲಿನಿಕ್ ಹೊಸಬರಿಗೆ ಇಂಟರ್ನ್ಶಿಪ್ ಕೊಡುವ ಕೇಂದ್ರವಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ಜೆ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪುರುಷೋತ್ತಮ್ ರಾಮಯ್ಯ, ಸಲೀಮ್ ಅಲ್ತಾಫ್ ಡೈಮಂಡ್, ಸತ್ತಾರ್ ಸುಲ್ತಾನ್ ಗೋಲ್ಡ್ ಮಾತನಾಡಿ ಶುಭ ಹಾರೈಸಿದರು. ಡಾ. ಕಾರ್ತಿಕೇಯನ್ ಮಲೇಷ್ಯಾ ಮತ್ತು ಡಾ. ಪರಾಗ್ ಸೆಹಗಲ್ ಅಮೇರಿಕಾದಿಂದ ವಿಡಿಯೋ ಕಾಲ್ ಮೂಲಕ ಶುಭ ಹಾರೈಸಿದರು.


ಸಮಾರಂಭದಲ್ಲಿ ಹಾಜಿ ಅಬ್ದುಲ್ ರಹಿಮಾನ್ ಅಫ್ನಾನ್ ಕೂಡಾಜೆ, ಮಾಜಿ ಮೇಯರ್ ಆಶ್ರಫ್, ಇಮ್ತಿಯಾಜ್ ಕೋಟೆಪುರ, ಕಂಕನಾಡಿ ಗೇಟ್ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ್ ಭಟ್, ಉಪಾಧ್ಯಕ್ಷೆ ಚೇತನ, ನಿಯಾಝ್ ಎನ್ ಎಸ್ ಟ್ರೇಡರ್ಸ್ ಮತ್ತಿತರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಡಾ. ಆಶ್ರಫ್ ಕೂಡಾಜೆ ಗಣ್ಯರಿಗೆ ಸ್ಮರಣಿಕೆ ಕೊಟ್ಟು ಗೌರವಿಸಿದರು.

Leave a Reply

Your email address will not be published. Required fields are marked *

error: Content is protected !!