March 24, 2026

ಪಡುಬಿದ್ರಿ: ನಕಲಿ ಬಂಗಾರದ ಸರ ನೀಡಿ ವಂಚನೆ: ಆರೋಪಿಯ ಬಂಧನ

0
image_editor_output_image95615686-1774363447779.jpg

ಪಡುಬಿದ್ರಿ: ಮಹಿಳೆಯೊಬ್ಬರಿಗೆ ನಕಲಿ ಬಂಗಾರದ ಸರ ನೀಡಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಹಾಗೂ ನಗದು ದೋಚಿದ್ದ ಪ್ರಕರಣದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಬಲ್ಲಾಪುರ ಬುಡುಗನಹಳ್ಳಿ ವಾಸಿ ಕಾವ್ಯ ಮತ್ತು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಬಸ್ಸಮ್ಮ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ಆರೋಪಿಗಳಾದ ಕಾವ್ಯ ಮತ್ತು ವೆಂಕಟೇಶ್, ತಮ್ಮ ಬಳಿ 6 ಪವನು ತೂಕದ ಚಿನ್ನದ ಸರವಿದೆ ಎಂದು ನಂಬಿಸಿದ್ದರು. “ತುರ್ತು ಹಣದ ಅವಶ್ಯಕತೆ ಇದೆ” ಎಂದು ಹೇಳಿ ಬಸ್ಸಮ್ಮ ಅವರಿಂದ 2 ಪವನು ತೂಕದ ಅಸಲಿ ಚಿನ್ನಾಭರಣ (ಮೌಲ್ಯ ₹1.50 ಲಕ್ಷ) ಹಾಗೂ ₹6,000 ನಗದು ಪಡೆದು ಪರಾರಿಯಾಗಿದ್ದರು. ಬಸ್ಸಮ್ಮ ಅವರು ಆಭರಣದ ಅಂಗಡಿಯಲ್ಲಿ ತಪಾಸಣೆ ನಡೆಸಿದಾಗ ತಮಗೆ ನೀಡಿದ್ದು ನಕಲಿ ಸರ ಎಂಬುದು ದೃಢಪಟ್ಟಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿ ಕಾವ್ಯಳನ್ನು ಬಂಧಿಸಿ, ಆಕೆಯಿಂದ ₹75,000 ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!