ಬಂಟ್ವಾಳ: ಸುಳ್ಯದ ಹೋಮ್ ಸ್ಟೇಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ
ಬಂಟ್ವಾಳ: ಬಂಟ್ವಾಳದ ಅವಿವಾಹಿತ ಯುವಕನೋರ್ವ ಸುಳ್ಯದ ಹೋಮ್ ಸ್ಟೇಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೊಂಡಾಲ ಶಾಂತಿಗುಡ್ಡೆ ನಿವಾಸಿ ತಿಲಕ್ ರಾಜ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸುಳ್ಯದ ಅರಂತೋಡು ಹೋಮ್ ಸ್ಟೇ ಕೋಣೆಯಲ್ಲಿ ಶರ್ಟ್ ಹಾಗೂ ಪ್ಯಾಂಟ್ ನ್ನು ಬಳಸಿಕೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂಟಿರಿಯರ್ ಕೆಲಸಗಾರನಾಗಿರುವ ತಿಲಕ್ ರಾಜ್ ಅವರು ಅತ್ಯಂತ ಮೃದುಸ್ವಭಾವದ ವ್ಯಕ್ತಿಯಾಗಿದ್ದು, ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ಮಾ.20 ರಂದು ಸಂಜೆ ಸುಳ್ಯದಲ್ಲಿ ಕೆಲಸ ಇದೆ ಎಂದು ಹೇಳಿ ಹೋಗಿರುವ ಈತ ಸುಳ್ಯದ ಆರಂತೋಡಿನಲ್ಲಿರುವ ಹೋಮ್ ಸ್ಟೇಯೊಂದರಲ್ಲಿ ಬಾಡಿಗೆಗೆ ರೂಮ್ ಪಡೆದಿದ್ದಾನೆ.




