ಮಡವೂರು ಸಿ ಎಂ ವಲಿಯುಲ್ಲಾಹಿ ಮಖಾಂ ಉರೂಸ್ ಮಾರ್ಚ್ 24ರಿಂದ ಎಪ್ರೀಲ್ 2ರ ತನಕ
ವಿಟ್ಲ; ವಲಿಯುಲ್ಲಾಹಿ ಖುತುಬುಝ್ಝಮಾನ್ ಸಿ ಎಂ ಅಬೂಬಕರ್ ಮುಸ್ಲಿಯಾರ್ ಮಡವೂರು ಅವರ 36 ನೇ ಉರೂಸ್ ಮುಬಾರಕ್ ಮಾರ್ಚ್ 24ರಿಂದ ಏಪ್ರೀಲ್ 2 ರ ತನಕ ವೈವಿಧ್ಯಪೂರ್ಣ ಕಾರ್ಯಕ್ರಮ ಗಳೊಂದಿಗೆ ನಡೆಯಲಿವೆ.
ಶವ್ವಾಲ್ 4 ರಂದು ಬೆಳಿಗ್ಗೆ 9:30 ಕ್ಕೆ ಸಮಸ್ತದ ಅಧ್ಯಕ್ಷ ಸಯ್ಯಿದ್ ಜಿಪ್ರಿ ಮುತ್ತು ಕೋಯ ತಂಙಳ್ ರವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನೊಂದಿಗೆ ಉರೂಸ್ ಗೆ ಚಾಲನೆ ದೊರಕಲಿದೆ.
ಸಯ್ಯಿದ್ ಝೈನುಲ್ ಆಬೀದೀನ್ ತಙಳ್ ಕುನ್ನುಂಗೈ ದ್ವಜಾರೋಹಣ ಮಾಡಲಿದ್ದಾರೆ.
ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ದಲ್ಲಿ ಅಂದು ಕುರ್‌ಆನ್ ಪಾರಾಯಣ ನಡೆಯಲಿದೆ.
ಮಾರ್ಚ್ 25 ಬುಧವಾರ ರಾತ್ರಿ 7,00 ಕ್ಕೆ ಮಡವೂರ್ ಮೌಲಿದ್ ಪಾರಾಯಣ ನಡೆಯಲಿದೆ. ಸ್ವಲಾತ್ ಮಜ್ಲಿಸ್ ಗೆ ಪಿಕೆ ಮುಹಮ್ಮದ್ ಬಾಖವಿ ವಾವಾಡ್ ನೇತೃತ್ವ ನೀಡಲಿದ್ದಾರೆ. ಶುಕ್ರವಾರ ರಾತ್ರಿ ಬುರ್ದಾ ಮಜ್ಲಿಸ್ ನಡೆಯಲಿದೆ.
ಅಬ್ದುಲ್ ಮಜೀದ್ ಬಾಖವಿ ತಲಂಗರ ಅವರು ಅನುಸ್ಮರಣಾ ಭಾಷಣ ಮಾಡಲಿದ್ದಾರೆ.
ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ನೇತೃತ್ವದಲ್ಲಿ ಮಜ್ಲಿಸ್ ನ್ನೂರು ನಡೆಯಲಿದೆ.
ಮಾರ್ಚ್ 30 ರಂದು ಬಶೀರ್ ಪೈಝಿ ದೇಶಮಂಗಳಂ ನೇತೃತ್ವದಲ್ಲಿ ಇಷ್ಕ್ ಮಜ್ಲಿಸ್ ನಡೆಯಲಿದೆ.
ಮಾರ್ಚ್ 31ಮಂಗಳವಾರ
ಸಿ ಎಂ ಮಖಾಂ ಶರೀಫ್ ಅಧೀನದ ಜಾಮಿಅ ಅಶ್ಹರಿಯ್ಯ ದಲ್ಲಿ ಕಲಿತ ಉಲಮಾಗಳಿಗೆ ಅಬ್ಬಾಸ್ ಅಲಿ ತಙಳ್ ಪಾಣಕ್ಕಾಡ್ ಅಶ್ಹರಿಯ್ಯ ಸನದು ಪ್ರಧಾನ ಮಾಡಲಿದ್ದಾರೆ.
ಏಪ್ರಿಲ್ 01 ಬುಧವಾರ ರಾತ್ರಿ 7 ಕ್ಕೆ ಧಿಕ್ರ್ ದುಹಾ ಸಮ್ಮೇಳನ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ನಾಸಿರ್ ಹಯ್ಯ್ ತಂಙಳ್ ಪಾಣಕ್ಕಾಡ್ ರವರ ದುಹಾದೊಂದಿಗೆ
ಪಾಣಕ್ಕಾಡ್ ಸಯ್ಯಿದ್ ಸ್ವಾದಿಕಲಿ ತಂಙಳ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಅಲ್ಲದೇ ಕೇರಳದ ಹಲವಾರು ಸಾದಾತ್ ಗಳು ಸೂಫೀವರ್ಯರು,ಖ್ಯಾತ ಭಾಷಣಗಾರರು ಸಮಸ್ತದ ಕೇಂದ್ರ ಮುಶಾವರ ಸದಸ್ಯರು,ಖಾಝಿಗಳೂ ರಾಜಕೀಯ,ಸಾಮಾಜಿಕ,ಶೈಕ್ಷಣಿಕ ಮುಖಂಡರು ಭಾಗವಹಿಸಲಿದ್ದಾರೆ.
ಮಾರ್ಚ್ 29 ಸೋಮವಾರ ಅನ್ನದಾನ ನಡೆಯಲಿದೆ ಎಂದು ಅನಿಲಕಟ್ಟೆ ಮಡವೂರ್ ಸಿ.ಎಂ.ಎಜುಕೇಶನ್ ಕಾಂಪ್ಲೆಕ್ಸ್ ನ ಕನ್ವೀನರ್ ಗಳಾದ ಅಬೂಬಕರ್ ಅನಿಲಕಟ್ಟೆ ಮತ್ತು ಪಿ.ಎ.ಮಹಮ್ಮದ್ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




