February 25, 2026

ಮಡಿಕೇರಿ: 20 ಅಡಿ ಆಳದ ಗದ್ದೆಗೆ ಉರುಳಿ ಬಿದ್ದ ಕಾರು

0
image_editor_output_image-1945644411-1772010377484.jpg

ಮಡಿಕೇರಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಬದಿಯ 20 ಅಡಿ ಆಳದ ಗದ್ದೆಗೆ ಉರುಳಿ ಬಿದ್ದ ಘಟನೆ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಎಂಬ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪ್ಪಂಗಳ ನಿವಾಸಿ ಕಾರಿನ ಚಾಲಕ ಸಾಗರ್ ಮತ್ತವರ ತಾಯ ಅಪಾಯದಿಂದ ಪಾರಾದ ಪ್ರಯಾಣಿಕರಾಗಿದ್ದಾರೆ. ಸಾಗರ್ ಅವರು ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ಬೆಟ್ಟಗೇರಿ ಮಡಿಕೇರಿ ಮುಖ್ಯರಸ್ತೆಯ ಹಂಪ್ಸ್ ಬಳಿಯ ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ರಸ್ತೆ ಬದಿಯ 20 ಅಡಿ ಆಳದ ಗದ್ದೆಗೆ ಕಾರು ಉರುಳಿ ಬಿದ್ದು ಸಂಪೂರ್ಣ ಜಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!