February 19, 2026

ಕೂಳೂರು ಸದಾಶಿವ ಶೆಟ್ಟಿ ಯಾವುದೇ ಅಪಪ್ರಚಾರಗಳಿಗೆ ಧೃತಿಗೆಡದೆ, ಸಮಾಜ ಸೇವೆ ಮುಂದುವರಿಸಬೇಕು: ವಿಟ್ಲ ಬಂಟರ ಸಂಘ ಒತ್ತಾಯ

0
image_editor_output_image2032003240-1771490696226.jpg

ವಿಟ್ಲ: ಕೊಡುಗೈ ದಾನಿ, ಸಮಾಜ ಸೇವಕ ಕೂಳೂರು ಸದಾಶಿವ ಶೆಟ್ಟಿ ಅವರು ಯಾವುದೇ ಅಪಪ್ರಚಾರಗಳಿಗೆ ಧೃತಿಗೆಡದೆ, ಪಟ್ಟಭದ್ರ ಹಿತಾಸಕ್ತಿಗಳ ಮಾತುಗಳಿಗೆ ಕಿವಿಗೊಡದೇ ಸಾಮಾಜಿಕ,ಧಾರ್ಮಿಕ ಸೇವೆಗಳನ್ನು ಮಂದುವರಿಸಬೇಕು ಎಂದು
ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಜೀವ್ ಭಂಡಾರಿ ಕುಂಡಕೋಳಿ ಒತ್ತಾಯಿಸಿದರು.

ವಿಟ್ಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸದಾಶಿವಣ್ಣ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು.ಅಶಕ್ತ ಸಮಾಜವನ್ನು ಮೇಲೆತ್ತುವ ಕಾರ್ಯದಿಂದ ಹಿಂದೆ ಸರಿಯಬಾರದು ಎಂದು ಅವರು ಹೇಳಿದರು.

ಸದಾಶಿವಣ್ಣ ಅವರಿಂದ ಅದೆಷ್ಟೋ ದೇವಸ್ಥಾನಗಳು ಜೀರ್ಣೋದ್ಧಾರ ಆಗಿವೆ . ಸಾವಿರಾರು ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಉಪಕಾರಗಳಾಗಿವೆ ಈ ಸೇವೆ ಮುಂದಯವರಿಯಬೇಕು. ಬೆರಳೆಣಿಕೆಯ ಮಂದಿಯ ಮಾತುಗಳನ್ನು ನಿರ್ಲಕ್ಷ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ
ಸಂಘದ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ, ಗೌರವಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ತಾಂತ್ರಿಕ ಸಲಹೆಗಾರ ಭಾಸ್ಕರ್ ಮೂಡುಬಿದಿರೆ ಹಾಗೂ ಗೌರವ ಸಲಹೆಗಾರ ಪ್ರಭಾಕರ ಶೆಟ್ಟಿ ಕೇಪು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!