February 18, 2026

ಉಡುಪಿ:ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದ ಯುವಕ ಮೃತ್ಯು

0
image_editor_output_image-1509257195-1771393513689.jpg

ಉಡುಪಿ: ಅಸ್ಸಾಂ ರಾಜ್ಯದ ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದ ಉಡುಪಿಯ ತಂಡದಲ್ಲಿದ್ದ ಓರ್ವ ಯುವಕ ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ಕಾಪು ತಾಲೂಕು ಕಟಪಾಡಿ ಸಮೀಪದ ಸರಕಾರಿಗುಡ್ಡೆ ನಿವಾಸಿ ಅಶೋಕ್ ಆಚಾರ್ಯ(33) ಎಂದು ಗುರುತಿಸಲಾಗಿದೆ. ಪ್ರವಾಸದ ವೇಳೆ ಅಶೋಕ್ ಆಚಾರ್ಯ ಅವರಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅಸ್ವಸ್ಥತೆ ಉಂಟಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುವಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಮತ್ತು ಬಂಧುಮಿತ್ರರು ದುಃಖದಲ್ಲಿ ಮುಳುಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!