ವಿಟ್ಲ: ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಗೊಂಡ ಬಡ ಕುಟುಂಬದ ಮನೆ ಸಹಾಯಹಸ್ತ: ಮಾನವೀಯತೆಗೆ ಸಾಕ್ಷಿಯಾದ ವಿಟ್ಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್..!
ವಿಟ್ಲ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಫೆ:10 ರಂದು ವೀರಕಂಭ ಗ್ರಾಮದ ಗಣೇಶ್ ಕೋಡಿ ಎಂಬಲ್ಲಿ ನಡೆದಿತ್ತು.
ಗಣೇಶ್ ಕೋಡಿ ನಿವಾಸಿ ರಾಜೇಶ್ವರಿ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ಬಟ್ಟೆ-ಬರೆ ಸೇರಿದಂತೆ ದಿನನಿತ್ಯ ಉಪಯೋಗದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ಇವರು ಕಡು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಈ ಘಟನೆಯಿಂದ ಕಂಗಾಲಾಗಿದ್ದರು.ಇವರ ಪರಸ್ಥಿತಿ ನೋಡಿ ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಅವರು ಬಡ ಕುಟುಂಬಕ್ಕೆ ಸಹಾಯ ಹಸ್ತ ನೀಡಿದ್ದಾರೆ.
ಇನ್ನೂ ಯಾರಾದರೂ ಈ ಕುಟುಂಬಕ್ಕೆ ನೆರವು ನೀಡುವ ಮನಸ್ಸಿದ್ದರೆ 9108587613 ನಂಬರಿಗೆ ಸಂಪರ್ಕಿಸಿ ಸಹಾಯ ಮಾಡಲು ವಿನಂತಿಸಲಾಗಿದೆ




