February 11, 2026

ವಿಟ್ಲ: ಐಟಿಐ ವಿದ್ಯಾರ್ಥಿಗಳ ನಡುವೆ ಜಗಳ: ವಿದ್ಯಾರ್ಥಿಗೆ ಚೂರಿಯಿಂದ ಇರಿತ-ತಡೆಯಲು ಬಂದ ವಿದ್ಯಾರ್ಥಿಗೂ ಗಾಯ

0
image_editor_output_image1010133337-1770795297971

ವಿಟ್ಲ: ಇಬ್ಬರು ಐಟಿಐ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಚೂರಿ ಇರಿತಗೊಂಡ ಘಟನೆ ವಿಟ್ಲದ ಐಟಿಐ ತರಗತಿ ಒಳಗಡೆ ಸಂಭವಿಸಿದೆ.

ಚೂರಿ ಇರಿತದಿಂದ ಪುತ್ತೂರು ಬನ್ನೂರು ನಿವಾಸಿ (17)ವರ್ಷದ ಬಾಲಕ ಮತ್ತು ಮಂಜೇಶ್ವರ ದೈಗೋಳಿ ನಿವಾಸಿ 17 ವರ್ಷದ ಇನ್ನೋರ್ವ  ಗಾಯಗೊಂಡಿದ್ದು, ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಥಮ ವರ್ಷದ ಎಲೆಕ್ಟಿಷಿಯನ್ ಐಟಿಐ ಕಲಿಯುತ್ತಿರುವ
ಅಪ್ರಾಪ್ತ ಬಾಲಕ ಮತ್ತು ವಿಟ್ಲ ನಿವಾಸಿ ಹೇಮಂತ್ ಎಂಬವರ ನಡುವೆ ಜಗಳ ಉಂಟಾಗಿತ್ತು. ಬಳಿಕ ಹೇಮಂತ್ ಚೂರಿ ತಂದಿದ್ದು, ಅದರಿಂದ ಬಾಲಕನಿಗೆ ಗೆ ಇರಿದಿದ್ದಾನೆ. ಅದನ್ನು ತಡೆಯಲು ಬಂದ ಮತ್ತೋರ್ವ ವಿದ್ಯಾರ್ಥಿ ಗೂ ಗಾಯವಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಚೂರಿ ಇರಿದ ಹೇಮಂತ್ ಎಂಬಾತನ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ವಿದ್ಯಾರ್ಥಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಜಗಳ ಉಂಟಾಗಿದೆ.

Leave a Reply

Your email address will not be published. Required fields are marked *

error: Content is protected !!