ಪ್ರಜ್ಞಾವಂತ ಮತದಾರ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಧನ್ಯವಾದಗಳು: ಅಬ್ದುಲ್ ಮಜೀದ್ ಕನ್ಯಾನ,
ಕಳೆದ ಹತ್ತು ವರ್ಷಗಳಿಂದ ಕನ್ಯಾನ ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ಸದಸ್ಯನಾಗಿ ಸೇವೆ ಸಲ್ಲಿಸುತಿದ್ದು 9/2/2026 ರಂದು ನಮ್ಮ ಅಧಿಕಾರ ಅವಧಿಯು ಮುಕ್ತಾಯ ಗೊಂಡಿರುತ್ತದೆ .
ಕಳೆದ ಹತ್ತು ವರ್ಷಗಳಲ್ಲಿ ನಮ್ಮಿಂದಾಗುವ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಪಂಚಾಯತ್ ಆಡಳಿತ ಮಂಡಳಿ ಮಾಡಿದ್ದೇವೆ. ಪ್ರಮುಖವಾಗಿ ರಸ್ತೆ ಕಾಂಕ್ರೀಟ್. ಕುಡಿಯುವ ನೀರು. ಚರಂಡಿ ಮತ್ತು ಮೋರಿ. ಸರಕಾರಿ ಶಾಲೆಗಳ ಅಭಿವೃದ್ಧಿ. ರಸ್ತೆ ಡಾಮರೀಕರಣ. ಅಂಗನವಾಡಿಗಳ ಅಭಿವೃದ್ಧಿ. ಸರಕಾರಿ ಆಸ್ಪತ್ರೆ ಅಭಿವೃದ್ಧಿ . ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣ. ಸಾರ್ವಜನಿಕ ಶೌಚಾಲಯ ನಿರ್ಮಾಣ. ಹಿಂದೂ ರುದ್ರಭೂಮಿ. ಘಣ ತ್ಯಾಜ್ಯ ಶೇಖರಣೆ ಕಟ್ಟಡ.ಕಾಲು ದಾರಿ ಅಭಿವೃದ್ಧಿ. ಧಾರ್ಮಿಕ ಸ್ಥಳಗಳ ಅಭಿವೃದ್ಧಿ. ಸಾರ್ವಜನಿಕ ಕಿಂಡಿ ಅಣೆಕಟ್ಟು ಗಳು. ಇನ್ನಿತರ ಮೂಲಭೂತ ಸೌಕರ್ಯಗಳನ್ನು ಮಾಡಿದ್ದೇವೆ. ನಾನು ತಪ್ಪು ಮಾಡಿದಾಗ ತಿದ್ದಿ ನನಗೆ ಬುದ್ಧಿ ಮಾತು ಹೇಳಿದ ಮತ್ತು ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನನ್ನ ಒಂದನೇ ವಾರ್ಡಿನ ಮತ್ತು ಕನ್ಯಾನ ಗ್ರಾಮದ ಪ್ರಜ್ಞಾವಂತ ನಾಗರಿಕರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.
ಅದೇ ರೀತಿ ಕಾಂಗ್ರೆಸ್ ಬೆಂಬಲಿತ ಕನ್ಯಾನ ಗ್ರಾಮ ಪಂಚಾಯತ್ ಆಡಳಿತ ಸಮಿತಿಯೂ ಗ್ರಾಮವನ್ನು ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ .
ಸುಂದರವಾದ ಪಂಚಾಯತ್ ಮೀಟಿಂಗ್ ಹಾಲ್. ಪಂಚಾಯತ್ ಸಭಾಂಗಣ ಆಗಿದೆ ಮತ್ತು ಈಗಾಗಲೇ ಪಂಚಾಯತ್ ಬಳಿ ಸುಸಜ್ಜಿತ ಮೆಸ್ಕಾಂ ಕಟ್ಟಡ ನಿರ್ಮಾಣ ಆಗಿ ಉದ್ಘಾಟನೆ ಬಾಕಿ ಇದೆ.
ಪಂಚಾಯತ್ ಬಳಿ ಪೊಸ್ಟ್ ಆಫಿಸ್ ಕಟ್ಟಡ. ಪಶುಸಂಗೋಪನೆ ಆಸ್ಪತ್ರೆ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಆಗಲಿದೆ.ನಮ್ಮಿಂದ ಏನಾದರೂ ತಪ್ಪು ಬಂದಿದ್ದರೆ ಕ್ಷಮೆಯಾಚಿಸುತಿದ್ದೇವೆ.
ನಮಗೆ ಸಹಕಾರ ಮಾಡಿದ ಪ್ರಜ್ಞಾವಂತ ನಾಗರಿಕರಿಗೆ. ಪ್ರಜ್ಞಾವಂತ ಪ್ರೀತಿಯ ಮತದಾರರಿಗೆ. ಪಕ್ಷದ ಪ್ರಮುಖ ನಾಯಕರಿಗೆ ಕಾರ್ಯಕರ್ತರಿಗೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಾರ್ಯದರ್ಶಿಗಳಿಗೆ ಅತ್ಯುತ್ತಮವಾಗಿ ಉತ್ಸಾಹದಿಂದ ಕೆಲಸ ಮಾಡುವ ಪ್ರೀತಿಯ ಪಂಚಾಯತ್ ಸಿಬ್ಬಂದಿಗಳಿಗೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಮತ್ತು ಗ್ರಾಮ ಸಹಾಯಕರಿಗೆ. ಅಂಗನವಾಡಿ ಕಾರ್ಯಕರ್ತೆಯರಿಗೆ. ಆಶಾ ಕಾರ್ಯಕರ್ತೆಯರಿಗೆ. ಶಾಲಾ ಅಧ್ಯಾಪಕರುಗಳಿಗೆ ಹಾಗೂ ಗ್ರಾಮದಲ್ಲಿ ಇರುವ ಇತರ ಸರಕಾರಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಬಿ ಎಲ್ ಒ ಗಳಿಗೆ ತುಂಬು ಹೃದಯದ ಕೃತಜ್ಞತೆಗಳು ಮತ್ತು ಅಭಿನಂದನೆಗಳು ….
ಎರಡು ಬಾರಿ ಬಂಟ್ವಾಳ ಕ್ಷೇತ್ರ ಯುವ ಕಾಂಗ್ರೆಸ್ ಚುನಾಯಿತ ಪ್ರಧಾನ ಕಾರ್ಯದರ್ಶಿಯಾಗಿ. ಕಳೆದ ಆರು ವರ್ಷಗಳಿಂದೀಚೆಗೆ ಪ್ರತಿಷ್ಠಿತ ಕನ್ಯಾನ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಮತ್ತು ಎರಡು ವರ್ಷಗಳಿಂದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಇದರ ಸದಸ್ಯನಾಗಿ ನಾನು ಸೇವೆ ಸಲ್ಲಿಸುತಿದ್ದೇನೆ ..
ಅಲ್ಲದೇ ಬಹಳಷ್ಟು ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿದ್ದೇನೆ.. ಸಾಮಾಜಿಕ ರಾಜಕೀಯ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದೇನೆ..
ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಯೋಜನೆ ಮತ್ತು ಯೋಚನೆ ಗಳಿರುವುದರಿಂದ ಪಕ್ಷದ ಹಿತದೃಷ್ಟಿಯಿಂದ
ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 20 ರಲ್ಲಿ 20 ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ಮತ್ತು ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷದ ಕೈ ಬಳಪಡಿಸಬೇಕಾಗಿ ವಿನಂಬ್ರ ವಿನಂತಿ …
ಚಿಕ್ಕ ವಯಸ್ಸಿನಲ್ಲೇ ನನಗೆ ರಾಜಕೀಯವಾಗಿ ಬಹಳಷ್ಟು ದೊಡ್ಡ ದೊಡ್ಡ ಸ್ಥಾನಗಳನ್ನು ನೀಡಿದ ನನ್ನ ಕಾಂಗ್ರೆಸ್ ಪಕ್ಷಕ್ಕೂ ನನ್ನ ಅಭಿಮಾನದ ರಾಜಕೀಯ ನಾಯಕರು ಮಾಜಿ ಸಚಿವರೂ ಆದ ಪ್ರೀತಿಯ ಶ್ರೀ ಬಿ ರಮಾನಾಥ ರೈ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗದರ್ಶಕರಾದ ಶ್ರೀ ಎಂ ಎಸ್ ಮಹಮ್ಮದ್ ಆತ್ಮೀಯರಾದ ಕೆ ಪಿ ಅಬ್ದುಲ್ ರಹಿಮಾನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಸದಸ್ಯರುಗಳಿಗೆ ಪಕ್ಷದ ಪ್ರಮುಖ ನಾಯಕರಿಗೆ. ಬೂತ್ ಸಮಿತಿ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು. ಮತ್ತು ಪಕ್ಷದ ಪ್ರೀತಿಯ ಕಾರ್ಯಕರ್ತರಿಗೆ ಹಾಗೂ ನನ್ನ ಅತ್ಯಂತ ಪ್ರೀತಿಯ ಯುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ ಧಾರ್ಮಿಕ ಮುಖಂಡರುಗಳಿಗೆ ಊರಿನ ಗಣ್ಯ ವ್ಯಕ್ತಿಗಳಿಗೆ ಮತ್ತೊಮ್ಮೆ ನನ್ನ ಕೋಟಿ ಕೋಟಿ ಪ್ರಣಾಮಗಳು ಮತ್ತು ಧನ್ಯವಾದಗಳು… ಇನ್ನು ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಾಯ ಸಹಕಾರ ನಮ್ಮ ಮೇಲಿರಲಿ…
ರಾಜಕೀಯವಾಗಿ ನನಗೆ ಶಕ್ತಿ ಮತ್ತು ಇನ್ನಷ್ಟು ಹೆಚ್ಚಿನ ಅವಕಾಶಗಳು ಬರಲು ಆಶಿರ್ವಾದ ಮಾಡಬೇಕಾಗಿ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತೇನೆ … ವಂದನೆಗಳೊಂದಿಗೆ
ಆಡಳಿತ ಮಂಡಳಿ ಪರವಾಗಿ
💐💐💐💐💐💐🙏
ಅಬ್ದುಲ್ ಮಜೀದ್ ಕನ್ಯಾನ
ಅಧ್ಯಕ್ಷರು ವಲಯ ಕಾಂಗ್ರೆಸ್ ಸಮಿತಿ ಕನ್ಯಾನ
ನಿಕಟಪೂರ್ವ ಸದಸ್ಯರು ಗ್ರಾಮ ಪಂಚಾಯತ್ ಕನ್ಯಾನ
ಸದಸ್ಯರು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು




