February 11, 2026

ಪುತ್ತೂರು ಮೂಲದ ಯುವಕ ರೈಲಿನಿಂದ ಬಿದ್ದು ಮೃತ್ಯು

0
IMG-20260210-WA0002.jpg

ಪುತ್ತೂರು: ಇಲ್ಲಿನ ಪುಣಚ ಮೂಲದ ಯುವಕನೋರ್ವ ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಪುಣಚ ಗ್ರಾಮದ ದೇವಿನಗರ ನಿವಾಸಿ ನಿಶಿತ್ ನಾಯ್ಕ್ (25) ಎಂದು ಗುರುತಿಸಲಾಗಿದೆ.

ನಿಶಿತ್ ರವರು ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಊರಿಗೆ ರೈಲಿನಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!