ಕಕ್ಕುಂಜೆಯಲ್ಲಿ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಉಡುಪಿ: ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಅಂಬಾಗಿಲು ವಾರ್ಡ್‌ನ ಕಕ್ಕುಂಜೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮೃತರನ್ನು ಪುರುಷೋತ್ತಮ ನಾಯಕ್(52) ಎಂದು ಗುರುತಿಸಲಾಗಿದೆ.
ಪುರುಷೋತ್ತಮ ನಾಯಕ್ ಅವರು ಬಾವಿಗೆ ಜಿಗಿಯುವ ಮೊದಲು ನೈಲಾನ್ ಹಗ್ಗವನ್ನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ತಲೆ ದೇಹದಿಂದ ಬೇರ್ಪಟ್ಟಿದ್ದು, ಬಾವಿಯ ನೀರು ಸಂಪೂರ್ಣ ರಕ್ತಮಯವಾಗಿತ್ತು. ಈ ಭೀಕರ ದೃಶ್ಯವನ್ನು ಕಂಡು ಸ್ಥಳದಲ್ಲಿ ಜಮಾಯಿಸಿದ ಕುಟುಂಬಸ್ಥರು ಮತ್ತು ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿತ್ತು.




