July 2, 2026

ಉಡುಪಿ: ರಸ್ತೆ ಅಪಘಾತದಲ್ಲಿ ಪುತ್ತೂರು ನಿವಾಸಿ ಸಾವು

0
image_editor_output_image-1065109665-1770641131713.jpg

ಉಡುಪಿ: ತ್ರಿಚಕ್ರದ ಇಲೆಕ್ಟ್ರಿಕ್ ವೀಲ್‌ಚೇರ್ ವಾಹನಕ್ಕೆ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ತ್ರಿಚಕ್ರ ವಾಹನ ಸವಾರ ಉಡುಪಿ ತಾಲೂಕಿನ ಪುತ್ತೂರು ನಿವಾಸಿಯಾಗಿರುವ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ಪುತ್ತೂರು ನಿವಾಸಿ ಮಾಧವಮೂರ್ತಿ ಆಚಾರ್ಯ (61) ಎಂದು ಗುರುತಿಸಲಾಗಿದೆ.

ಪುತ್ತೂರು ಗ್ರಾಮದ ಶ್ರೀ ಓಂಕಾರೇಶ್ವರ ಭಜನಾ ಮಂದಿರದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಉಡುಪಿಯಿಂದ ಸಂತೆಕಟ್ಟೆ ಕಡೆಗೆ ಅತೀ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶ್ರೀಹರಿರಾವ್ ಎಂಬುವವರು, ಮುಂದೆ ಚಲಿಸುತ್ತಿದ್ದ ಮೂರು ಚಕ್ರದ ಎಲೆಕ್ಟ್ರಿಕ್ ವೀಲ್‌ಚೇರ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!