February 9, 2026

ವಿಟ್ಲಪಡ್ನೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ: ವಿಟ್ಲ ಸಿಟಿ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ ನೇತೃತ್ವದಲ್ಲಿ ನಡೆದ ಶಿಬಿರ

0
IMG-20260209-WA0038

ವಿಟ್ಲ: ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ ಸಂದೇಶ್ ಶೆಟ್ಟಿ ಬಿಕ್ನಾಜೆಯವರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವು ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷೆ ಶ್ವೇತಾ ಆರ್ ಕೆ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಕಾರ್ಯಕ್ರಮವನ್ನು ಶಿಲ್ಪಶ್ರೀ ಯುವಕ ಮಂಡಲದ ಸ್ಥಾಪಕ ಸದಸ್ಯ ಹಾಗೂ ಹಿರಿಯ ಕೃಷಿಕ ಶ್ರೀ ನಾರಾಯಣ ಭಟ್ ಪಳ್ಳಿ ಗದ್ದೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭೆಯಲ್ಲಿ ಕಾರ್ಯಕ್ರಮದ ಸಂಯೋಜಕ ಬಿ ಸಂದೇಶ್ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಮಹತ್ವದ ಬಗ್ಗೆ ಹಾಗೂ ವಿಟ್ಲ ಪಡ್ನೂರು ಗ್ರಾಮದಲ್ಲಿ ಅನೇಕ ಆರೋಗ್ಯ ಶಿಬಿರವನ್ನು ನಡೆಸಿ ಸುಮಾರು 800 ಜನರಿಗೆ ಕನ್ನಡಕ ವಿತರಣೆ ಮಾಡಿದ್ದನ್ನು ಹಾಗೂ ಈ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರನ್ನು ನೆನಪಿಸಿದರು.

ಬಾಲಕೃಷ್ಣ ಶೆಟ್ಟಿ ಯವರು ಮಾತನಾಡಿ , ಇಂತಹ ಆರೋಗ್ಯ ಶಿಬಿರಗಳು ಈಗಿನ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಬಹಳಷ್ಟು ಮಹತ್ವವಾದದ್ದು ನಮ್ಮ ದೇಹದ ಆರೋಗ್ಯವನ್ನು ಮುಂಜಾಗ್ರತವಾಗಿ ಪರೀಕ್ಷಿಸಿಕೊಳ್ಳುವ ಒಂದು ಅವಕಾಶ ಎಂದು ಬಣ್ಣಿಸಿದರು ಪ್ರಜ್ಞ ಸಲಹಾ ಕೇಂದ್ರದ ಪ್ರಾಂಶು ಪಾಲೆ ಶ್ರೀಮತಿ ವಿಜಯ ಶೆಟ್ಟಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.

ಮತ್ತೋರ್ವ ಅತಿಥಿ ಸ್ಪೀಡಿ ಮಲ್ಟಿ ಮೋಡ್ ನ ಅಸಿಸ್ಟೆಂಟ್ ಮ್ಯಾನೇಜರ್ ವಿಶಾಲ್ ಆಳ್ವ ರವರು ಶಿಬಿರದ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ವಿಟ್ಲ ಇದರ ವೈದ್ಯೆ ಶ್ರೀಮತಿ ಸ್ವಸ್ತಿ ಸಂತೋಷ್ ಶೆಟ್ಟಿ .ಯನೆಪೋಯ ವೈದ್ಯಕೀಯ ಸಂಸ್ಥೆಯ ಡಾಕ್ಟರ್ ಸಿರಾಜ್, ಶಿಲ್ಪಶ್ರೀ ಯುವಕ ಮಂಡಲದ ಅಧ್ಯಕ್ಷರಾದ ರೋಹಿತ್ ರೈ ಚಂಬರಡ್ಕ ಉಪಸ್ಥಿತರಿದ್ದರು*
ಈ ಕಾರ್ಯಕ್ರಮದಲ್ಲಿ ಶ್ರೀಬಿ ಸಂದೇಶ್ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿ, ಸಹಕರಿಸಿದ ಯನಪೋಯ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳನ್ನು, ವಿಟ್ಲ ಆರೋಗ್ಯ ಸಮುದಾಯ ಕೇಂದ್ರದ ಪಿ ಎಚ್ ಓ ಗೀತಾ ರವರು ನಿಂಗಪ್ಪ ಹಾಗೆಯೇ ಆಶಾ ಕಾರ್ಯಕರ್ತೆಯರನ್ನು ಶಿಲ್ಪಶ್ರೀ ಯುವಕ ಮಂಡಲದ ಕಾರ್ಯದರ್ಶಿ ಜಯರಾಮ್ ಗೌಡ ಮಾರುಗುಳಿ ಹಾಗೂ ಕಾರ್ಯಕ್ರಮವನ್ನು ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಪಂಚಾಯತಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯ ಮಿತ್ರರಿಗೆ ಹಾಗೂ ಪಂಚಾಯತಿನ ಅಭಿವೃದ್ಧಿ ಅಧಿಕಾರಿಯವರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಹಾಗೂ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡ ಸುಮಾರು 150 ಜನ ನಾಗರಿಕರಿಗೆಲ್ಲರಿಗೂ ಅಭಿವಂದನೆ ಸಲ್ಲಿಸಿದರ.

ಈ ಕಾರ್ಯಕ್ರಮದಲ್ಲಿ ಕಳೆದ ವರ್ಷ ತೆಂಗಿನ ಮರದಿಂದ ಬಿದ್ದು ಗಾಯಕೊಂಡು ಈಗ ಚೇತರಿಸಿಕೊಂಡಿರುವ ಲೋಕೇಶ್ ಕುಂಟ್ರಕಲ ರವರಿಗೆ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕ ಅಧ್ಯಕ್ಷ ಶ್ರೀ ಸಂದೇಶ್ ಶೆಟ್ಟಿಯವರು ಆರ್ಥಿಕ ಸಹಾಯಧನವನ್ನು ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಆರ್ ಕೆ ಅವರ ಉಪಸ್ಥಿತಿಯಲ್ಲಿ ನೀಡಿದರು.

Leave a Reply

Your email address will not be published. Required fields are marked *

You may have missed

error: Content is protected !!