March 26, 2026

ಸುಳ್ಯ: ರಸ್ತೆ ಬದಿಯ ಚರಂಡಿಗೆ ಇಳಿದು ಸಿಲುಕಿಕೊಂಡ ಕಂಟೇನರ್‌ ವಾಹನ

0
image_editor_output_image1038361743-1770619240381.jpg

ಸುಳ್ಯ: ನಗರದ ಖಾಸಗಿ ಬಸ್ ನಿಲ್ದಾಣ ಬಳಿ ಕಂಟೇನರ್‌ ವಾಹನ ಒಂದು ರಸ್ತೆ ಬದಿಯ ಚರಂಡಿಗೆ ಇಳಿದು ಸಿಲುಕಿಕೊಂಡ ಘಟನೆ ಸಂಭವಿಸಿದೆ.

ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ನಗರದಲ್ಲಿ ಲಾರಿಯ ಚಾಲಕ ಹೆದ್ದಾರಿ ಬದಿ ವಾಹನ ನಿಲ್ಲಿಸಲೆಂದು ರಸ್ತೆ ಬದಿಗೆ ವಾಹನವನ್ನು ತಂದಾಗ ಅಲ್ಲಿ ಚರಂಡಿ ಇರುವ ಬಗ್ಗೆ ಮಾಹಿತಿ ತಿಳಿಯದೆ ಲಾರಿ ಚರಂಡಿಗೆ ಇಳಿದು ಸಿಲುಕಿಕೊಂಡಿದೆ. ಬಳಿಕ ಕ್ರೇನ್‌ ಮೂಲಕ ವಾಹನವನ್ನು ತೆರವು ಮಾಡಲಾಯಿತು. ನಗರದ ಅಸಮರ್ಪಕ ಚರಂಡಿ ವ್ಯವಸ್ಥೆಯೂ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!