ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಸಂದೇಶ: ಓರ್ವ ಆರೋಪಿಯ ಬಂಧನ
ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಫೇಸ್ ಬುಕ್, ಇನ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್ ಕಾಟ ಆರಂಭವಾಗಿದೆ. ಇದರಿಂದ ಅವರು ಬೇಜಾರ್ ಆಗಿದ್ದಾರೆ. ಈಗಾಗಲೇ ಓರ್ವನ ವಿರುದ್ಧ ದೂರು ನೀಡಿ, ಜೈಲಿಗೆ ಹಾಕಿಸಿರುವ ಶಾಸಕಿ ಇನ್ನೂ ದೂರು ಕೊಡಲ್ಲ ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜನ, ಎಂ.ಎಲ್.ಎ ಪದವಿ ಪಾರ್ಟ್ ಟೈಂ, ಸೋಶಿಯಲ್ ಮೀಡಿಯಾ ಫುಲ್ ಟೈಂ. ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದೀರಲ್ಲ, ಒಮ್ಮೆ ಅಲ್ಲಿ ಓಡಾಡಿ, ಇನ್ನೂ ಬ್ಯೂಟಿಫುಲ್ ಆಗಿರ್ತೀರಾ. ಈಯಮ್ಮನಿಗೆ ಮತ ಹಾಕಿ ಗೆಲ್ಲಿಸಿದ್ದಕ್ಕೆ ಸಾರ್ಥಕವಾಯಿತು. ಇವರೇನು ಶಾಸಕರೋ ಅಥವಾ ಸೋಶಿಯಲ್ ಮೀಡಿಯಾ ಪ್ರಭಾವಿತರಾ ಎಂದೆಲ್ಲಾ ಜನ ಮೆಸೇಜ್ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಶಾಸಕರಾದ ಕೂಡಲೇ ನಮಗೆ ವೈಯಕ್ತಿಕ ಜೀವನ ಇರಲ್ವಾ? ಗಂಡ-ಮಕ್ಕಳು, ಸಂಸಾರ, ಸ್ನೇಹಿತರು ಇರಲ್ವಾ ಎಂದು ಕಿಡಿಕಾರಿದ್ದಾರೆ. ನಾವು ಕೆಲಸ ಮಾಡುತ್ತಿಲ್ಲವಾ ಎಂದು ಪೋಲಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.




