January 31, 2026

ಮಂಗಳೂರು: ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು: ವಿಡಿಯೋ ವೈರಲ್

0
image_editor_output_image108265251-1767506609939.jpg

ಮಂಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿಯೊಡೆದಿದೆ. ಕಾರು ಸಿನಿಮೀಯ ರೀತಿಯಲ್ಲಿ‌ ನುಗ್ಗಿ ಬಂದಿದೆ. ಘಟನೆಯ ಭಯಾನಕ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಗಳೂರು ನಗರ ಹೊರವಲಯದ ಮರಕಡ ಎಂಬಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿದ್ದವರು ಪವಾಡ ಸಾದೃಶ್ಯವಾಗಿ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಸ್ಥಳೀಯರು ಬಂದು ಕಾರಿನಲ್ಲಿದ್ದವರನ್ನು ಕಾಪಾಡಿದ್ದಾರೆ.

ಫಾ| ಆಯಂಡ್ರೋ ಅವರು ನೀರುಡೆಯ ನಿವಾಸದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಜಪೆ ಮೂಲಕ ಬೊಂದೇಲ್ ನತ್ತ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ಮರಕಡದಲ್ಲಿ ಸಾಗುತ್ತಿದ್ದಾಗ ಏಕಾಏಕಿ ಕಾರಿನ ಟೈರ್ ಸ್ಫೋಟಗೊಂಡಿದೆ. ಇದರಿಂದಾಗಿ ಅವರ ನಿಯಂತ್ರಣ ಕಳೆದು ಕೊಂಡ ಕಾರು ರಸ್ತೆ ಬದಿಗೆ ವೇಗವಾಗಿ ಸಾಗಿ, ಕೆಳಭಾಗದಲ್ಲಿದ್ದ ಮನೆಯೊಂದರ ಅಂಗಳದಲ್ಲಿ ಮಗುಚಿ ಬಿದ್ದಿದೆ.

ಕೂಡಲೇ ಸ್ಥಳೀಯರು ಅಲ್ಲಿಗೆ ಧಾವಿಸಿ ಕಾರನ್ನು ಸಹಜ ಸ್ಥಿತಿಗೆ ತಂದು ಕಾರಿನಲ್ಲಿದ್ದ ಧರ್ಮಗುರುವನ್ನು ರಕ್ಷಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ಜಖಂಗೊಂಡಿದೆ.

Leave a Reply

Your email address will not be published. Required fields are marked *

error: Content is protected !!