ಕನ್ಯಾನ: ಬಂಡಿತ್ತಡ್ಕ ಸರಕಾರಿ ಶಾಲೆಯಲ್ಲಿ ಮಕ್ಕಳ ಹಬ್ಬ ಮತ್ತು ಸನ್ಮಾನ ಕಾರ್ಯಕ್ರಮ
ಕನ್ಯಾನ: ಬಂಡಿತ್ತಡ್ಕ ಸರಕಾರಿ ಶಾಲೆಯಲ್ಲಿ ಹಳೇವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಹಾಗೂ ಊರಿನ ನಾಗರಿಕರು, ಪೋಷಕರ ಸಹಕಾರದಿಂದ ಅದ್ದೂರಿಯಾಗಿ ಮಕ್ಕಳ ಹಬ್ಬ ನಡೆಯಿತು.
ಮಕ್ಕಳ ಜಾರುಬಂಡಿ ಹಾಗೂ ಆಟೋಪಕರಣಗಳ ಉದ್ಘಾಟನೆಯನ್ನು ಉನೈಸ್ ಪೆರಾಜೆ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಸಂಸ್ಥಾಪಕರು ಇವರು ನಡೆಸಿಕೊಟ್ಟರು. ಬಳಿಕ ಸಾಲು ಮರದ ತಿಮ್ಮಕ್ಕ ಇವರ ಸವಿನೆನಪಿನ ಸ್ಮರಣಾರ್ಥವಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಶ್ರೀ ಡಾ/ ಗಂಗಾಧರ ಬನಾರಿ ನಿವೃತ ಪ್ರಾoಶುಪಾಲರು ಗೋಕರ್ಣತೇಶ್ವರ ಕಾಲೇಜು ಮಂಗಳೂರು ಇವರು ನಡೆಸಿದರು.
ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀಯುತ ಡಾ/ಗಂಗಾಧರ ಬನಾರಿ ಈ ಕಾರ್ಯಕ್ರಮದ ಕುರಿತು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಶಾಲಾ ದಾಖಲಾತಿಯು ಹೆಚ್ಚಾಗಬೇಕೆಂಬ ನಿಲುವನ್ನು ಹೊರಹಾಕಿದರು. ಪಂಚಾಯತ್ ಉಪಾದ್ಯಕ್ಷರಾದ ಅಬ್ದುಲ್ ರೆಹಮಾನ್ ಈ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿ ಮಾಡಬೇಕೆಂಬ ಕಿವಿ ಮಾತನ್ನು ಹೇಳಿದರು. ಕನ್ನಡ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ ಇದರ ಸಂಸ್ಥಾಪಕರು ಉನೈಸ್ ಪೆರಾಜೆ ಮಾತನಾಡಿ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಮುಚ್ಚುವ ಹಂತದಲ್ಲಿರುವ ಕನ್ನಡ ಶಾಲೆಯಲ್ಲಿ ಜಾರುಬಂಡಿ ಹಾಗೂ ಆಟೋಪಕರಣಗಳ ಅಳವಡಿಕೆಯು ದಾಖಲಾತಿ ಹೆಚ್ಚು ಮಾಡುವ ಕುರಿತಾಗಿ ಹಾಗೂ ಕಾರ್ಯಕ್ರಮ ಆಯೋಜನೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಇಸ್ಮಾಯಿಲ್ ಕುಕ್ಕಾಜೆ ಮಾತನಾಡಿ ಕಾರ್ಯಕ್ರಮದ ಆಯೋಜನೆಯ ಸಂಪೂರ್ಣ ರೂಪುರೇಷೆಯ ಬಗ್ಗೆ, ಸಹಕಾರ ನೀಡಿರುವ ಹಳೆವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿರುವ ಹಳೆ ವಿದ್ಯಾರ್ಥಿ ಸಂಘದ ಗೌರವಾದ್ಯಕ್ಷರಾದ ಕೃಷ್ಣಕುಮಾರ್ ಕಮ್ಮಾಜೆ ಮಾತನಾಡಿ ಶಾಲೆಯಲ್ಲಿ ದಾಖಲಾತಿ ಹೆಚ್ಚು ಮಾಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 1-5 ನೇ ತರಗತಿಗೆ ದಾಖಲಾತಿ ಪಡೆಯುವ ಮಕ್ಕಳ ಖಾತೆಯಲ್ಲಿ ಠೇವಣಿ ಇಡುವ ಕುರಿತು ಹಾಗೂ ಮಕ್ಕಳಿಗೆ ಬ್ಯಾಗ್, ಪುಸ್ತಕ, ಬರವಣಿಗೆ ಉಪಕರಣಗಳನ್ನು ನೀಡುವ ಕುರಿತು ತಿಳಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಚಂದ್ರಶೇಖರ ಇವರು ಶಾಲಾ ಕಾರ್ಯಕ್ರಮ ಆಯೋಜನೆ ಹಾಗೂ ಕಲಿಕೋಪಕರಣಗಳ ಅಳವಡಿಕೆಯಿಂದ ದಾಖಲಾತಿ ಹೆಚ್ಚಳದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಂಚಾಯತ್ ಸದಸ್ಯರಾದ ಮೊಯಿದು ಕುಂಞಿ, ಬುಶ್ರಿಯಾ, ಅಬ್ದುಲ್ ಮಜೀದ್ , SDMC ಅದ್ಯಕ್ಷರಾದ ಕಮರುನ್ನೀಸಾ, ನೌಫಲ್ ಸಾಲೆತೂರ್, ನಾಟಕ ರಂಗದ ಮಾಂತ್ರಿಕರಾದ ರಾಜಶೇಖರ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶಾರದ ,sdmc ಉಪಾಧ್ಯಕ್ಷರು, ಸದಸ್ಯರು,ಪೋಷಕರು ವಿದ್ಯಾಭಿಮಾನಿಗಳು, ಊರಿನ ನಾಗರಿಕರು, ಹಳೇವಿದ್ಯಾರ್ಥಿಗಳು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಮಕ್ಕಳು,ನಮ್ಮ ಶಾಲಾ ಮಕ್ಕಳು ಹಾಗೂ ಪೋಷಕರಿಗೆ ಬಹುಮಾನ ನೀಡಿದೆವು. ಹಿರಿಯ ವಿದ್ಯಾರ್ಥಿಗಳು ಹಾಗೂ ಸಾಧಕ ರಿಗೆ ಸನ್ಮಾನ ಗೈದರು. ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾದ ಮಗುವನ್ನು ಅಭಿನಂದಿಸಿದರು. ದಾನಿಗಳು ನೀಡಿದ ಮಿಕ್ಸಿ ಮತ್ತು ಡಯಾಸ ನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ಸವಿರುಚಿ ಯಾದ ಭೋಜನದ ಬಳಿಕ ಸ್ಥಳೀಯ ಅಂಗನವಾಡಿ ಪುಟಾಣಿಗಳು ಹಾಗೂ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ನಡೆದವು. ಸಂಜೆಯ ಬಳಿಕ ಹಳೆ – ವಿದ್ಯಾರ್ಥಿಗಳಿಂದ ಮದಿಮೆದ ಇಲ್ಲಡ್ ನಾಟಕ ಪ್ರದರ್ಶನವಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೆಕೀನಾ ರವರು ಸ್ವಾಗತಿಸಿ, ವಂದಿಸಿದರು. ಅತಿಥಿ ಶಿಕ್ಷಕಿಯಾದ ವನಿತಾ ಮತ್ತು ರಾಜೇಂದ್ರ ಸರ್ ಕಾರ್ಯಕ್ರಮ ನಿರೂಪಣೆ ಗೈದರು.




