ಕಿರುತೆರೆ ನಟಿ ನಂದಿನಿ ಸಿಎಂ ಆತ್ಮಹತ್ಯೆ
ಬೆಂಗಳೂರು: ಕನ್ನಡ ಮತ್ತು ತಮಿಳು ಧಾರಾವಾಹಿಗಳು ಅಭಿನಯಿಸಿದ್ದ ಕಿರುತೆರೆ ನಟಿ ನಂದಿನಿ ಸಿಎಂ ಅವರು ಬೆಂಗಳೂರಿನ ಆರ್ಆರ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಂದಿನಿ ಅವರು ಇಂದು ಸಂಜೆ ಬೆಂಗಳೂರಿನ ಆರ್ಆರ್ ನಗರದಲ್ಲಿ ಸಾವಿಗೆ ಶರಣಾಗಿದ್ದು, ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’ ಧಾರಾವಾಹಿಗಳಲ್ಲಿ ನಂದಿನಿ ಅಭಿನಯಿಸಿದ್ದರು.




