January 31, 2026

SDTU ಬಂಟ್ವಾಳ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ: ಅಧ್ಯಕ್ಷರಾಗಿ ಶಂಸುದ್ದೀನ್ ಪಳ್ಳಮಜಲು, ಕಾರ್ಯದರ್ಶಿಯಾಗಿ ಹುಸೈನಬ್ಬ ಕುಮೇರು ಆಯ್ಕೆ

0
IMG-20251228-WA0003.jpg

ಬಿ.ಸಿ ರೋಡ್: ಡಿ. 27- ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಬಂಟ್ವಾಳ ತಾಲೂಕು ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬಿ ಸಿ ರೋಡ್ ನ ಲಯನ್ಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು SDTU ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸಲೀಮ್ GK ಗುರುವಾಯನಕೆರೆಯವರು ವಹಿಸಿದರು.

SDTU ಬಂಟ್ವಾಳ ತಾಲೂಕು ಸಮಿತಿಗೆ ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ಪಳ್ಳಮಜಲು, ಉಪಾಧ್ಯಕ್ಷರಾಗಿ ಲತೀಫ್ ಬಿ.ಸಿ. ತಲಪಾಡಿ, ಕಾರ್ಯದರ್ಶಿಯಾಗಿ ಹುಸೈನಬ್ಬ ಕುಮೇರು, ಜತೆ ಕಾರ್ಯದರ್ಶಿಯಾಗಿ ಕಾದರ್ ಆಲಾಡಿ, ಕೋಶಾಧಿಕಾರಿಯಾಗಿ ಅಶ್ರಫ್ ಕೋಡಂಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿದಾಯತ್ (ಸಿಟಿ ಅಂಬುಲೆನ್ಸ್), ಇಕ್ಬಾಲ್ ಪರ್ಲಿಯ, ಮುಸ್ತಫ ಕಾವಳಕಟ್ಟೆ ಆಯ್ಕೆಯಾಗಿದ್ದು, ಪದಾಧಿಕಾರಿಗಳ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರು ನೆರವೇರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ SDTU ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಸಾಲ್ಮರ,ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಸುಖೇಶ್ ಕೆ.ಪಿ, ಆದಿ ದ್ರಾವಿಡ ಸಮಾಜ ಸೇವಾಸಂಘದ ಕೋಶಾಧಿಕಾರಿ ರಾಜಾ ಚೆಂಡ್ತಿಮಾರ್, SDTU ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಬೋಳಿಯಾರ್, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಫಿಲಿಫ್ ಹನ್ರಿ ಡಿಸೋಜ, ನ್ಯಾಯವಾದಿ ಕಬೀರ್ ಕೆಮ್ಮಾರ, ಕೈಕಂಬ ಆಟೋ ಪಾರ್ಕ್ ಅಧ್ಯಕ್ಷರಾದ ಆದಂ ಪಲ್ಲ, ಸ್ನೇಹ ಜೀವಿ ಚಾಲಕರ ಟ್ರೇಡ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಮೀರ್ ಉಪಸ್ಥಿತರಿದ್ದರು.

ಮುಸ್ತಫ ಕಾವಳಕಟ್ಟೆ ಸ್ವಾಗತಿಸಿದರೆ, ಅನ್ವರ್ KH ರವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!