January 31, 2026

ಡಿ.28ರಂದು ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ.) ಕೊಳ್ನಾಡು – ಸಾಲೆತ್ತೂರು ಇದರ ವತಿಯಿಂದ ಸಾರ್ವಜನಿಕ ಸೇವೆಗೆ ಅಂಬುಲೆನ್ಸ್ ಲೋಕಾರ್ಪಣೆ.

0
image_editor_output_image-1126856812-1766761765448

ಸಾಮಾಜಿಕ ಸೇವೆ ಮತ್ತು ಮಾನವೀಯತೆಯನ್ನು ಆಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ.) ಕೊಳ್ನಾಡು – ಸಾಲೆತ್ತೂರು ಇದರ ವತಿಯಿಂದ ಸಾರ್ವಜನಿಕ ಸೇವೆಗೆ ಸಮರ್ಪಿತ ಆಂಬುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಇದೇ ಡಿಸೆಂಬರ್ 28ರ ಆದಿತ್ಯವಾರದಂದು ಸಾಲೆತ್ತೂರು ಜಂಕ್ಷನ್‌ನಲ್ಲಿ ನಡೆಯಲಿದೆ.

ಈ ಆಂಬುಲೆನ್ಸ್ ಸೇವೆ ತುರ್ತು ಅಪಘಾತ ಪರಿಸ್ಥಿತಿಯಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಪ್ರದೇಶದ ಜನತೆ, ಅಗತ್ಯವಿರುವ ರೋಗಿಗಳು ಹಾಗೂ ಸಾಮಾಜಿಕ ಕಾರ್ಯಗಳಿಗೆ ಯಾವ ಸಮಯದಲ್ಲಾದರೂ ಲಭ್ಯವಾಗುವಂತೆ ಟ್ರಸ್ಟ್ ವತಿಯಿಂದ ವ್ಯವಸ್ಥೆ ಮಾಡಲಾಗಿದೆ.

ಜನತಾ ಸೇವೆಯನ್ನು ಕಣ್ಮಣಿಯಾಗಿ ಕಾಣುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದ್ದು, ಇದರಿಂದ ಸಾಮಾನ್ಯ ಜನರಿಗೆ ವೇಗವಾದ ಮತ್ತು ಭದ್ರ ವೈದ್ಯಕೀಯ ತುರ್ತು ಬೆಂಬಲ ದೊರೆಯುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಖಾದರ್ ಸಾಲೆತ್ತೂರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!