2 ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ
ಚಿತ್ರದುರ್ಗ: ಕೌಟುಂಬಿಕ ಕಲಹ ಹಿನ್ನೆಲೆ 2 ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಷ್ಪ (25) ಮೃತ ಮಹಿಳೆ. ಕಾಟಿಹಳ್ಳಿ ಗ್ರಾಮದ ಹರೀಶ್ ನಗರದ ಖಾಸಗಿ ಗಾರ್ಮೆಂಟ್ಸ್ ಕಾರ್ಮಿಕನಾಗಿದ್ದ. ಈ ವೇಳೆ ಈ ಗಾರ್ಮೆಂಟ್ಸ್‌ಗೆ ತೆರಳ್ತಿದ್ದ ಪುಷ್ಪ ಹಾಗೂ ಹರೀಶ್ ಮಧ್ಯೆ ಪ್ರೇಮಾಂಕುರವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.
ಆದ್ರೆ ಅನ್ಯಜಾತಿ ಎಂಬ ಕಾರಣಕ್ಕೆ ಹರೀಶ್ ಹಾಗೂ ಪುಷ್ಪ ಪೋಷಕರ ಮಧ್ಯೆ ತಾರತಮ್ಯ ಭಾವವಿದ್ದು, ಹರೀಶ್ ಮನೆಗೆ ಪುಷ್ಪ ಪೋಷಕರಿಗೆ ಎಂಟ್ರಿ ಇರಲಿಲ್ಲ. ಆದರೂ ಎದೆಗುಂದದೇ ಪತಿಯೇ ಪರದೈವ ಎಂದು ನಂಬಿ ಸತತ ಎರಡು ವರ್ಷಗಳಿಂದ ಅನ್ಯೋನ್ಯವಾಗಿದ್ದ ಪುಷ್ಪ ಹಾಗೂ ಹರೀಶ್‌ಗೆ ಒಂದೂವರೆ ವರ್ಷದ ಒಂದು ಮದ್ದಾದ ಗಂಡು ಮಗುವಿದೆ.




