March 18, 2026

ಸುಳ್ಯ: ಗುಂಡೇಟಿಗೆ ಕಡವೆ ಬಲಿ

0
image_editor_output_image-982422627-1764399728628.jpg

ಸುಳ್ಯ: ಪೆರಾಜೆ-ನಿಡ್ಯಮಲೆ ರಸ್ತೆಯ ಪಾನತ್ತಿಲದ ರಸ್ತೆ ಬದಿಯಲ್ಲಿ ಕಡವೆಯ ಮೃತದೇಹವೊಂದು ಗುರುವಾರ ಪತ್ತೆಯಾಗಿದೆ.

ನವೆಂಬರ್ 27ರ ರಾತ್ರಿ ಬೇಟೆಗಾರರು ಕಡವೆಗೆ ಗುಂಡು ಹಾರಿಸಿದ್ದಾರೆ. ಇದರಿಂದ ಅದು ರಸ್ತೆ ಬದಿ ಬಂದು ಬಿದ್ದಿದೆ ಎಂದು ಶಂಕಿಸಲಾಗಿದೆ.

ಸಂಪಾಜೆ ಅರಣ್ಯ ಇಲಾಖೆಯ ಅಧಿಕಾರಿಗಳು ಸತ್ತ ಕಡವೆಯನ್ನು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಿದ್ದಾರೆ. ರಸ್ತೆಯ ಬದಿಯಲ್ಲಿ ಕಡವೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!