March 18, 2026

ಚಲಿಸುತ್ತಿರುವ ರೈಲಿನಿಂದ ಯುವತಿಯನ್ನು ಹೊರಗೆ ತಳ್ಳಿದ ಟಿಟಿ: ರೈಲು ಹಳಿಗೆ ಬಿದ್ದು ಯುವತಿ ಸಾವು

0
image_editor_output_image-821762154-1764399302192.jpg

ಉತ್ತರ ಪ್ರದೇಶ : ಚಲಿಸುತ್ತಿರುವ ರೈಲಿನಿಂದ ರೈಲ್ವೇ ಟಿಟಿ ಯುವತಿಯೋರ್ವಳನ್ನು ಹೊರಗೆ ತಳ್ಳಿದ ಪರಿಣಾಮ ಯುವತಿ ರೈಲು ಹಳಿಗೆ ಬಿದ್ದು ದಾರುಣ ಅಂತ್ಯ ಕಂಡ ಘಟನೆ ಉತ್ತರ ಪ್ರದೇಶದ ಲಖನೌ ನಲ್ಲಿ ಸಂಭವಿಸಿದೆ.

ಟಿಕೆಟ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಟಿಟಿ ಆಕೆಯನ್ನು ಹೊರಗೆ ತಳ್ಳಿದ್ದಾನೆ ಎನ್ನಲಾಗಿದೆ.

ಮೃತಳನ್ನು ಆರತಿ ಯಾದವ್ ಎಂದು ಗುರುತ್ತಿಸಲಾಗಿದ್ದು ಈಕೆ ನೌಕಾಪಡೆಯ ಅಧಿಕಾರಿಯಾದ ಅಜಯ್ ಸಿಂಗ್ ಅವರ ಪತ್ನಿ ಎಂದು ತಿಳಿದು ಬಂದಿದೆ. ರೈಲಿನಿಂದ ತಳ್ಳಿಹಾಕಿದ ಟಿಟಿಇ ಸಂತೋಷ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ದ ಇಟಾವಾ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೃತ ಆರತಿ ಅವರು ಚಿಕಿತ್ಸೆಗಾಗಿ ದೆಹಲಿಗೆ ಹೊರಟಿದ್ದರು. ಆದರೆ, ಅವರು ಕಾಯ್ದಿರಿಸಿದ ರೈಲಿಗೆ ಬದಲಾಗಿ, ಜನಸಂದಣಿಯ ಗಡಿಬಿಡಿಯಲ್ಲಿ 04089 ಪಾಟ್ನಾ-ಆನಂದ್ ವಿಹಾರ್ ಸ್ಪೆಷಲ್ ರೈಲು ಹತ್ತಿದ್ದರು. ಟುಇಕೇಟ್ ಪರಿಶೀಲನಾ ವೇಳೆ ಟಿಟಿ ಸಂತೋಷ್ ಕುಮಾರ್ ಅವರೊಂದಿಗೆ ವಾಗ್ವಾದ ನಡೆದಿದೆ.

ಸಂತೋಷ್ ಅವರು ಮೊದಲು ಆರತಿ ಅವರ ಪರ್ಸ್ ಅನ್ನು ರೈಲಿನ ಹೊರಗೆ ಎಸೆದು, ಬಳಿಕ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ಹೊರಗೆ ತಳ್ಳಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇಟಾವಾ ರೈಲ್ವೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!