ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಶೇಖರಣೆ: ಇಬ್ಬರು ವಿದ್ಯಾರ್ಥಿಗಳ ಬಂಧನ
ಉಡುಪಿ : ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಶೇಖರಣೆ ಮಾಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಉಡುಪಿ ಮಣಿಪಾಲದ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಗುಜರಾತ್ ಮೂಲದ ಕುಶ್ ಕೆ ಯುಶ್ ಪಟೇಲ್ (20) ಹಾಗೂ ಉತ್ತರ ಪ್ರದೇಶ ಮೂಲದ ದೇವಾಂಶ್ ತ್ಯಾಗಿ (22) ಬಂಧಿತ ಆರೋಪಿಗಳು.
ಆರೋಪಿಗಳು ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡುಬಂದಿದೆ.




