ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ
ಧಾರವಾಡ: ಅದು ಇಬ್ಬರು ಮಕ್ಕಳು, ಮುದ್ದಾದ ಪತ್ನಿ ಹಾಗೂ ಹಿರಿಯ ತಂದೆ ಇದ್ದ ಸುಃಖ ಸಂಸಾರ. ಅದ್ಯಾರ ಕೆಟ್ಟ ಕಣ್ಣು ಆ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಪ್ರಪಂಚದ ಜ್ಞಾನವೇ ಗೊತ್ತಿಲ್ಲದ ಮುಗ್ದ ಮನಸ್ಸಿನ ಮಕ್ಕಳೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನೂ ಬಾಳಿ ಬದುಕಬೇಕಿದ್ದ ಮಕ್ಕಳು ಶಾಲಾ ಸಮವಸ್ತ್ರದಲ್ಲೇ ಇಹಲೋಕ ತ್ಯೆಜಿಸಿದ್ದನ್ನ ಕಂಡು ಇಡೀ ಚಿಕ್ಕಮಲ್ಲಿಗವಾಡ ಗ್ರಾಮವೇ ಮಮ್ಮಲ ಮರುಗಿದೆ. ಎಂತಹ ತಂದೆ, ತಾಯಿಯಾದರೂ ಮಕ್ಕಳನ್ನು ಬದುಕಿಸಿ ತಾವು ಪ್ರಾಣ ಕೊಟ್ಟ ಉದಾಹರಣೆ ನಮ್ಮ ಕಣ್ಣಮುಂದೆ ಇವೆ. ಆದರೆ, ಈ ತಂದೆ ತನ್ನ ಮಕ್ಕಳ ಭವಿಷ್ಯವನ್ನೇ ಕೊಂದು ತಾನೂ ಇಹಲೋಕ ತ್ಯೆಜಿಸಿದ್ದಾನೆ.
ಧಾರವಾಡ ತಾಲೂಕಿನ ಚಿಕ್ಕ ಮಲ್ಲಿಗವಾಡ ಗ್ರಾಮದ ನಾರಾಯಣ ಶಿಂಧೆ ಎಂಬಾತ ತನ್ನ ತಂದೆ ವಿಠ್ಠಲ ಶಿಂಧೆ, ಮಕ್ಕಳಾದ ಶಿವಕುಮಾರ ಶಿಂಧೆ ಹಾಗೂ ಶ್ರೀನಿಧಿ ಶಿಂಧೆಯವರೊಂದಿಗೆ ಅದೇ ಗ್ರಾಮದ ಹೊರವಲಯದಲ್ಲಿರುವ ಯಲ್ಲಮನ ಬಾವಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.




